ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವೀಕೆಂಡ್ ವಿತ್ ಪಬ್ಲಿಕ್ ಅಂತ ನಿನ್ನೆ ಬೈಕ್ ಮೂಲಕ ಕೆಲ ವಾರ್ಡ್ಗಳ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಗಮನ ಸೆಳೆದರು.
ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ದ್ವಿಚಕ್ರ ವಾಹನದಲ್ಲಿ ಓಡಾಡಿದ ಸಚಿವ ಸುರೇಶ್ ಕುಮಾರ್ ವಾರ್ಡ್ಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ನಾಗರಿಕರ ಮನೆಗಳಿಗೆ ಭೇಟಿ ಕೊಟ್ಟರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಅನೌಪಚಾರಿಕ ಭೇಟಿಯಲ್ಲಿ ಅನೇಕರೊಂದಿಗೆ ಮಾತನಾಡುತ್ತಾ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಪಡೆದುಕೊಂಡರು.