ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳಿಗೆ ಹಳೇ ಬಸ್​ ಪಾಸ್​ ತೋರಿಸಿ ಮಾರ್ಚ್ ಅಂತ್ಯದವರೆಗೆ ಪ್ರಯಾಣಿಸಲು ಅವಕಾಶ! - bus Passstudent bus Pass

ಮಾರ್ಚ್ ಅಂತ್ಯದವರೆಗೆ ಕಳೆದ ಸಾಲಿನ ಬಸ್​ ಪಾಸ್​ನಲ್ಲಿ ಪ್ರಯಾಣಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

student bus Pass
ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ಬಸ್​ ಪಾಸ್​ ತೋರಿಸಿ ಮಾರ್ಚ್ ಅಂತ್ಯದವರೆಗೆ ಪ್ರಯಾಣಿಸಲು ಅವಕಾಶ

By

Published : Feb 26, 2021, 5:11 PM IST

ಬೆಂಗಳೂರು: ಪ್ರಸ್ತುತ ಶಾಲಾ-ಕಾಲೇಜುಗಳ ಪುನರಾಂಭದ ಹಿನ್ನೆಲೆ ಸಾರಿಗೆ ನಿಗಮಗಳ ಬಸ್​ಗಳಲ್ಲಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಪಾಸ್​ ಆಧಾರದಲ್ಲಿಯೇ ಪ್ರಯಾಣಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ.

ಹೀಗಾಗಿ ಎಲ್ಲಾ ವರ್ಗದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಳೇ ಪಾಸ್​ನೊಂದಿಗೆ (2019-20) ಪ್ರಸ್ತುತ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಶುಲ್ಕ ಪಾವತಿಸಿರುವ ರಸೀದಿಯನ್ನ ತೋರಿಸಿ ಮಾರ್ಚ್ 31ರವರೆಗೆ ಸಂಚರಿಸಬಹುದಾಗಿದೆ.

ಈ ಹಿಂದೆ ಫೆಬ್ರವರಿ 28ರವರೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸದ್ಯದ ಸ್ಥಿತಿಗತಿ ಗಮನಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ABOUT THE AUTHOR

...view details