ಬೆಂಗಳೂರು: ಕಾಲೇಜಿನ ಮಹಿಳಾ ಶೌಚಾಲಯಕ್ಕೆ ಒಳನುಗ್ಗಿ ರಹಸ್ಯವಾಗಿ ವಿದ್ಯಾರ್ಥಿನಿಯರ ಅಂಗಾಂಗಗಳನ್ನು ಚಿತ್ರೀಕರಿಸುತ್ತಿದ್ದ ಯುವಕನನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಮಾತನಾಡಿದರು ಶುಭಂ ಆಜಾದ್ ಬಂಧಿತ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಭಾರತ ಮೂಲದ ಆರೋಪಿಯು ಕಾಲೇಜಿನ ಮಹಿಳಾ ಶೌಚಾಲಯಕ್ಕೆ ರಹಸ್ಯವಾಗಿ ಅವಿತುಕೊಳ್ಳುತ್ತಿದ್ದ. ಶೌಚಕ್ಕಾಗಿ ಬರುವ ಮಹಿಳೆ ಹಾಗೂ ಯುವತಿಯರ ಅರೆನಗ್ನ ಸ್ಥಿತಿಯಲ್ಲಿರುವ ಫೋಟೊ ಹಾಗೂ ವಿಡಿಯೋ ಗಳನ್ನ ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ. ಇದೇ ರೀತಿ ನ. 18 ರಂದು ಶೌಚಾಲಯದಲ್ಲಿರುವಾಗ ಸಿಕ್ರೆಟ್ ಆಗಿ ವಿಡಿಯೊ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಕಂಡು ಹೌಹಾರಿದ್ದಾರೆ.
ಹಿಡಿಯಲು ಹೋಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾಗಿದ್ದಾನೆ. ಕಾಲೇಜು ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಈ ಸಂಬಂಧ ಕ್ರಮಕೈಗೊಂಡ ಆಡಳಿತ ಮಂಡಳಿ ಮಹಿಳಾ ಶೌಚಾಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಯುವಕನ ಫೋಟೋ ಮಾಡಿಸಿ ಈತನ ಪತ್ತೆಗಾಗಿ ಕಾಲೇಜಿನ ಎಲ್ಲ ಡಿಪಾರ್ಟ್ಮೆಂಟ್ ಕಳುಹಿಸಿದ್ದರು.
ಪರಿಶೀಲನೆ ಬಳಿಕ ಬಿಬಿಎಂ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಈತನನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಆಡಳಿತ ಮಂಡಳಿಗೆ ಕ್ಷಮಾಪಣೆ ಪತ್ರ ಬರೆದಿದ್ದ. ವಿದ್ಯಾರ್ಥಿ ಹಿತದೃಷ್ಟಿಯಿಂದ ಆತನಿಗೆ ಬೈದು ಬುದ್ದಿ ಹೇಳಿತ್ತು. ಆದರೆ, ನವೆಂಬರ್ 18 ರಂದು ಮತ್ತೆ ಹಳೆ ಚಾಳಿ ಮುಂದುವರೆದ ಪರಿಣಾಮ ವಿದ್ಯಾರ್ಥಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.
ಇದುವರೆಗೂ ಸುಮಾರು 1200 ಕ್ಕೂ ಹೆಚ್ಚು ವಿಡಿಯೋಗಳನ್ನು ರಹಸ್ಯವಾಗಿ ಸೆರೆಹಿಡಿದು ಪೋಲ್ಡರ್ ನಲ್ಲಿ ಸಂಗ್ರಹಿಸಿದ್ದ ಎಂಬುವುದು ಗೊತ್ತಾಗಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಓದಿ:ಮನೆಯಲ್ಲಿ ಮಹಿಳೆ ಕೊಲೆ: ವರದಕ್ಷಿಣೆಗಾಗಿ ಪತಿಯಿಂದಲೇ ಕೃತ್ಯ ಶಂಕೆ