ಬೆಂಗಳೂರು: ನದಿ ತೀರದಲ್ಲಿ, ಹಚ್ಚ ಹಸಿರಿನ ಮಧ್ಯೆ ಇಂಪಾದ ಸಂಗೀತದೊಂದಿಗೆ ರುಚಿ ರುಚಿಯಾದ ಬಿಸಿ ಬಿಸಿಯಾಗಿರೋ ಇಷ್ಟದ ತಿಂಡಿ ತಿನಿಸು ಸೇವಿಸಬೇಕು ಅನ್ನೋದು ಹಲವರ ಕನಸು. ಇಂತಹವರ ಕನಸು ನನಸು ಮಾಡೋಕಂತನೇ ಇಲ್ಲೊಂದು ಸ್ಪೆಷಲ್ ರೆಸ್ಟೋರೆಂಟ್ ರೆಡಿಯಾಗಿದೆ.. ಕೊಂಚ ಡಿಫರೆಂಟ್ ಆಗಿರೋ ಈ ರೆಸ್ಟೋರೆಂಟ್ ನಿಮ್ಗೆ ವಿಭಿನ್ನ ಎಕ್ಸ್‌ಪಿರಿಯನ್ಸ್ ನೀಡಲಿದೆ.
ಹರಿವ ನೀರು, ಇಂಪಾದ ಸಂಗೀತದ ಜೊತೆ ಬಗೆಬಗೆ ಖಾದ್ಯ; ಬೆಂಗಳೂರಲ್ಲಿ ಸ್ಟ್ರೀಂ ರೆಸ್ಟೋರೆಂಟ್ ಆರಂಭ - stream restaurant Bengaluru news
ನದಿ ತೀರದಲ್ಲಿ, ಸುತ್ತ ಹಸಿರಿನ ಮಧ್ಯೆ ಇಂಪಾದ ಸಂಗೀತದೊಂದಿಗೆ ರುಚಿ ರುಚಿ ಬಿಸಿ ಬಿಸಿಯಾಗಿರೋ ಇಷ್ಟದ ತಿಂಡಿ ತಿನಿಸು ಸೇವಿಸಬೇಕು ಅನ್ನೋದು ಹಲವರ ಕನಸು. ಇಂತಹವರ ಕನಸು ನನಸು ಮಾಡೋಕೆ ಇಲ್ಲೊಂದು ರೆಸ್ಟೋರೆಂಟ್ ರೆಡಿಯಾಗಿದೆ.. ಕೊಂಚ ಡಿಫರೆಂಟ್ ಆಗಿರೋ ಈ ರೆಸ್ಟೋರೆಂಟ್ ನಿಮ್ಗೆ ವಿಶೇಷ ಅನುಭವ ನೀಡಲಿದೆ.
ತಿಳಿಯಾದ ಬೆಳಕು, ಸುತ್ತಲೂ ಹಸಿರಿನ ಲೋಕ.. ಜೊತೆಗೆ ಕಾಲಿಟ್ಟ ಕೂಡಲೇ ಖುಷಿ ಕೊಡುವ ಹರಿಯುವ ಝಳು ಝುಳು ನೀರಿನ ನಿನಾದ. ಈ ಎಲ್ಲಾ ದೃಶ್ಯಗಳು ಬೆಂಗಳೂರಿನಲ್ಲಿ ಆರಂಭವಾಗಿರುವ ವಾಟರ್ ರೆಸ್ಟೋರೆಂಟ್‌ನಲ್ಲಿ ಕಾಣ ಸಿಗುತ್ತೆ. ಅಕ್ಟೋಬರ್ 3 ರಂದು ಸ್ಟ್ರೀಂ ರೆಸ್ಟೋರೆಂಟ್- ಸ್ಟೋನಿ ಬ್ರೂಕ್‌ಗೆ ನೀರಿನ ಮೇಲೆ ಲಲನೆಯರು ವಾಕ್ ಮಾಡುವ ಮೂಲಕ ಅದ್ದೂರಿ ಚಾಲನೆ ಕೊಟ್ಟರು. ಸಚಿವ ಸಿ ಟಿ ರವಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ರೆಸ್ಟೋರೆಂಟ್ ಕಣ್ತುಂಬಿಕೊಂಡರು. ಇಂಥದ್ದೊಂದು ಅಪೂರ್ವ ಅವಕಾಶವನ್ನು ವಿರೌಡ್ ವೆಂಚರ್ಸ್‌ನ ಮಾಲೀಕ ವಿನಯ್ ವಿ ಕಲ್ಪಿಸಿಕೊಟ್ಟಿದ್ದಾರೆ.
ರಾಜರಾಜೇಶ್ವರಿ ನಗರ (ಆರ್ ಆರ್ ನಗರ)ದಲ್ಲಿರುವ ಈ ಸ್ಟ್ರೀಂ ರೆಸ್ಟೋರೆಂಟ್‌ಗೆ ಇಂದಿನಿಂದ ಗ್ರಾಹಕರಿಗೆ ಸೇವೆ ನೀಡುತ್ತಿದೆ. ರೆಸ್ಟೋರೆಂಟ್ ನಲ್ಲಿ ಚೈನೀಸ್, ಥಾಯ್, ಜಪಾನೀಸ್, ಇಂಡೋನೇಷಿಯನ್ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತದ ಎಲ್ಲಾ ತರಹೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.