ಕರ್ನಾಟಕ

karnataka

ETV Bharat / state

ಕೊನೆಗೂ ಒಕ್ಕಲಿಗರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ - Government Order

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ ಸಂದರ್ಭದಲ್ಲೇ ಒಕ್ಕಲಿಗ ಅಭಿವೃದ್ದಿ ನಿಮಗ ಸ್ಥಾಪನೆ ಮಾಡಬೇಕೆಂದು ಬಿಜೆಪಿ ಪಕ್ಷದ ನಾಯಕರೂ ಸೇರಿದಂತೆ ಅನೇಕ ಒಕ್ಕಲಿಗ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈಗ ಅಂತಿಮವಾಗಿ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ..

Karnataka State Govt Announce Vokkaliga Development Board
ವಿಧಾನಸೌಧ (ಸಂಗ್ರಹ ಚಿತ್ರ)

By

Published : Jul 17, 2021, 10:23 PM IST

ಬೆಂಗಳೂರು : ಹಲವು ದಿನಗಳ ಒತ್ತಾಯದ ನಂತರ ಕೊನೆಗೂ ಒಕ್ಕಲಿಗರ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಇದೀಗ ಆದೇಶ ಹೊರಡಿಸಿದೆ. ಒಕ್ಕಲಿಗ, ವಕ್ಕಲಿಗ, ಸರ್ಪ ವಕ್ಕಲಿಗ, ಹಳ್ಳಿಕಾರ್ ವಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್​ ಕಾರ್​ ವಕ್ಕಲಿಗ, ದಾಸ ಒಕ್ಕಲಿಗ, ಹಳ್ಳಿಕಾರ್, ಮರಸು ಒಕ್ಕಲಿಗ, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಈ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿ ಸರ್ಕಾರ ಅಧೀಕೃತ ಆದೇಶ ಇಂದು ಹೊರಡಿಸಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಹಾಗೂ ನಿಗಮದ ಚಟುವಟಿಕೆಗಳಿಗೆ 500 ಕೋಟಿ ರೂ. ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಆದೇಶ ಪ್ರತಿ

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್​ ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರಡ್ಡಿ, ಒಕ್ಕಲಿಗ, ಮರಸು ಒಕ್ಕಲಿಗ ಗೌಡ(GOUDA)/ಗೌಡ' (GOWDA), ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗಡೆ, ಕಮ್ಮ, ರಶ್ಮಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ/ಉತ್ತಮ ಕೊಳಗ ಜಾತಿಗಳಿಗೆ ಪ್ರವರ್ಗ 3 'ಎ'ನಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ.

ದಿನಾಂಕ : 30.03.2002ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 3ಎ ನಲ್ಲಿ ಕ್ರ.ಸಂ:10 (8) ಯಿಂದ (1)ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್​ ಕಾರ್‌ ಒಕ್ಕಲಿಗ, ದಾಸ್ ಒಕ್ಕಲಿಗ ರೆಡ್ಡಿ, ಒಕ್ಕಲಿಗ, ಮರಸು ಒಕ್ಕಲಿಗ, ಗೌಡ(GOUDA/ಗೌಡ (GOWDA), ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾವು, ಹಗಡೆ, ಕಮ್ಮ ರಡ್ಡಿ, ಗೌಂಡರ್‌, ನಾಮಧಾರಿ ಗೌಡ, ಉಪ್ಪಿನ ಕೊಳಗ ಉತ್ತಮ ಕೊಳಗ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ “ಒಕ್ಕಲಿಗ ಅಭಿವೃದ್ಧಿ ನಿಗಮ"ವನ್ನು ಸ್ವಾಪಿಸಿ ಆದೇಶಿಸಿಸಲಾಗಿದೆ.

ಆದೇಶ ಪ್ರತಿ

1. ಒಕ್ಕಲಿಗೆ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ 2013ರಡಿಯಲ್ಲಿ ನೋಂದಾಯಿಸಿ ಸ್ಥಾಪಿಸುವುದು.
2. ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಪೂರಕ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪ್ರತ್ಯೇಕ ಆದೇಶ ಹೋರಡಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಆದೇಶವನ್ನು ಹೊರಡಿಸುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು ಒಕ್ಕಲಿಗ ಮತಗಳನ್ನು ಬಿಜೆಪಿಯ ಕಡೆಗೆ ಸೆಳೆಯುವ ಯತ್ನವೇ? ಎಂಬ ಮಾತುಗಳು ಕೇಳಿ ಬರುತ್ತಿವೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ ಸಂದರ್ಭದಲ್ಲೇ ಒಕ್ಕಲಿಗ ಅಭಿವೃದ್ದಿ ನಿಮಗ ಸ್ಥಾಪನೆ ಮಾಡಬೇಕೆಂದು ಬಿಜೆಪಿ ಪಕ್ಷದ ನಾಯಕರೂ ಸೇರಿದಂತೆ ಅನೇಕ ಒಕ್ಕಲಿಗ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈಗ ಅಂತಿಮವಾಗಿ ಒಕ್ಕಲಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗ ಹಾಗೂ ಅದರ ಉಪ ಜಾತಿಗಳು ಹೆಚ್ಚಾಗಿ ಜೆಡಿಎಸ್​ ಮತ್ತು ಕಾಂಗ್ರೆಸ್​ ಮತ ಬ್ಯಾಂಕಾಗಿ ಪರಿವರ್ತನೆಗೊಂಡಿದ್ದವು. ಬಿಜೆಪಿಗೆ ಅಷ್ಟಾಗಿ ಒಕ್ಕಲಿಗ ಮತ ಎಳೆಯಲು ಆಗಿರಲಿಲ್ಲ. ಇದೀಗ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕಲ್ಲು ಹೊಡೆದಿರುವ ಬಿಜೆಪಿ, ಇದರಲ್ಲಿ ಯಶಸ್ವಿಯಾಗುವುದೇ ಕಾದು ನೋಡಬೇಕಿದೆ.

ABOUT THE AUTHOR

...view details