ಬೆಂಗಳೂರು : ರಾಜ್ಯದಲ್ಲಿ ಇಂದು 27,535 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 989 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 802 ಮಂದಿ ಡಿಸ್ಜಾರ್ಜ್ ಆಗಿದ್ದು, ಒಟ್ಟು 39,31,263 ಮಂದಿ ಗುಣಮುಖರಾಗಿದ್ದಾರೆ. ಇಂದಿನ ಕೋವಿಡ್ ಸಾವಿನ ಸಂಖ್ಯೆ ಶೂನ್ಯ. ಸದ್ಯ ಸಕ್ರಿಯ ಪ್ರಕರಣಗಳು 6,693 ಏರಿಕೆಯಾಗಿದೆ.
ಈ ಮೂಲಕ ಸೋಂಕಿತರ ಪ್ರಮಾಣ ಶೇ. 3.59 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 3.82 ರಷ್ಟಿದೆ. ಇಲ್ಲಿಯವರೆಗೂ ಒಟ್ಟು ಸಂಖ್ಯೆ 6,72,13,407 ಜನರನ್ನು ಪರೀಕ್ಷಿಸಲಾಗಿದೆ. ವಾರದ ಸಾವಿನ ಪ್ರಮಾಣ ಶೇ. 0.06 ರಷ್ಟಿದೆ.
ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 6,334 ಮಂದಿ ಒಳಗಾಗಿದ್ದು, ಇದುವರೆಗೂ 11,86,561 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 927 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,12,065 ಕ್ಕೆ ಏರಿಕೆ ಆಗಿದೆ.
ಇಂದು 750 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,88,855 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೋವಿಡ್ ಗೆ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸಕ್ರಿಯ ಪ್ರಕರಣಗಳು 6,239 ಇದೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ 16,970ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ :ವಿದ್ಯುತ್ ಶಾಕ್ನಿಂದ ಕೋಮಾ ಸ್ಥಿತಿಯಲ್ಲಿದ್ದ ರಾಜ್ಯ ಫುಟ್ಬಾಲ್ ಆಟಗಾರ ಸಾವು