ಬೆಂಗಳೂರು: ರಾಜ್ಯದಲ್ಲಿಂದು 1,17,748 ಜನರಿಗೆ ಕೊರೊನಾ ತಪಾಸಣೆ (Corona Test) ನಡೆಸಲಾಗಿದೆ. ಇದರಲ್ಲಿ 328 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಮೂಲಕ ಸೋಂಕು 29,90,856ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.27% ರಷ್ಟು ದಾಖಲಾಗಿದೆ. 247 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 29,44,669 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳು 8,027ರಷ್ಟಿವೆ. 9 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,131 ಕ್ಕೆ ಏರಿದೆ. ಸಾವಿನ ಪ್ರಮಾಣ 2.74% ಇದೆ.
ಬೆಂಗಳೂರಿನಲ್ಲಿ 176 ಜನರಿಗೆ ವೈರಸ್ ತಗುಲಿದ್ದು, ಸೋಂಕಿನ ಪ್ರಮಾಣ 12,53,353ಕ್ಕೆ ಏರಿಕೆ ಆಗಿದೆ. 102 ಜನರು ಗುಣಮುಖರಾಗಿದ್ದು, 12,30,482 ಜನರು ಡಿಸ್ಚಾರ್ಜ್ ಆಗಿದ್ದಾರೆ. 5 ಜನ ಮೃತರಾಗಿದ್ದು, ಸಾವಿನ ಸಂಖ್ಯೆ 16,303 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣ 6567 ಇವೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
1) ಡೆಲ್ಟಾ ( Delta/B.617.2) - 1698
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೆಟಾ ವೈರಸ್ (BETA/B.1.351) -8
5) ಡೆಲ್ಟಾ ಸಬ್ಲೈನ್ ಏಜ್ - 300
8) ಈಟಾ- 01
ಇದನ್ನೂ ಓದಿ:ರೈತರು ಬೆಳೆ ಕಟಾವು ಬಳಿಕ ಒತ್ತುವರಿ ತೆರವು ಮಾಡಿ: ಹೈಕೋರ್ಟ್ ಸೂಚನೆ