ಕರ್ನಾಟಕ

karnataka

ETV Bharat / state

ಬಸವಣ್ಣನೇ ನನಗೆ ವೈಚಾರಿಕ ಗುರು: ಸಿದ್ದರಾಮಯ್ಯ ಟ್ವೀಟ್​... ಕೈ ನಾಯಕರಿಂದ ಶುಭಾಶಯ - ಮಾಜಿ ಸಚಿವರಾದ ಹೆಚ್ ಕೆ ಪಾಟೀಲ್

ಇಂದು ಸಾಮಾಜಿಕ ಕ್ರಾಂತಿ ಸೂರ್ಯ ಬಸವಣ್ಣನವರ ಜಯಂತಿ. ಈ ಹಿನ್ನೆಲೆ ರಾಜ್ಯದ ಪ್ರಮುಖರು ಟ್ವೀಟ್​ ಮಾಡುವ ಮುಖಾಂತರ ನಾಡಿನ ಜನರಿಗೆ ಶುಭಾಶಯ ತಿಳಿಸಿದ್ದಾರೆ.

State Congress leaders greet  Basavanna Jayanthi
ಜಗಜ್ಯೋತಿ ಬಸವಣ್ಣ ಜಯಂತಿಯ ಶುಭಕೋರಿದ ರಾಜ್ಯ ಕಾಂಗ್ರೆಸ್ ನಾಯಕರು

By

Published : Apr 26, 2020, 2:37 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಶುಭಾಶಯ ಸಲ್ಲಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕ ಹಲವು ನಾಯಕರು ತಮ್ಮ ಶುಭ ಸಂದೇಶ ನೀಡಿದರೆ, ಮತ್ತೆ ಕೆಲವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಟ್ವೀಟ್​ನಲ್ಲಿ, ಬಡವರು,‌ ಶೋಷಿತರು, ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು. ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಟ್ವೀಟ್ ನಲ್ಲಿ, ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ ಎಂದು ಹೇಳಿದ್ದಾರೆ.

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ತಮ್ಮ ಟ್ವೀಟ್​​​ನಲ್ಲಿ, ‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ'ಎಂದವರು ವಚನಕಾರ ಬಸವಣ್ಣನವರು. ಪ್ರಸಕ್ತ ಕಾಲದಲ್ಲಿ ಅವರ ತತ್ತ್ವ ಉಪದೇಶಗಳು ಮಹತ್ವದ್ದಾಗಿವೆ. ಅವುಗಳನ್ನು ಪಾಲಿಸಿ ಸಾಮರಸ್ಯದ ಜೀವನ ನಡೆಸಿದರೆ ಬಸವಣ್ಣನವರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಮ್ಮ ಟ್ವೀಟ್​ನಲ್ಲಿ, 'ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳವಳಿಯ ರೂಪ ಕೊಟ್ಟು, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ ಬಸವ ಜಯಂತಿಯ ಶುಭಾಶಯಗಳು ಎಂದಿದ್ದಾರೆ.

ಮಾಜಿ ಸಚಿವರಾದ ಹೆಚ್ ಕೆ ಪಾಟೀಲ್, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ನಾಡಿನ ಜನತೆಗೆ ಬಸವ ಜಯಂತಿ ಶುಭಾಶಯ ತಿಳಿಸಿದ್ದಾರೆ.

ABOUT THE AUTHOR

...view details