ಕರ್ನಾಟಕ

karnataka

ETV Bharat / state

'ಮೋದಿ ಜೀ, ನಮ್ಮ ಮಕ್ಕಳ ವ್ಯಾಕ್ಸಿನ್‌ ವಿದೇಶಕ್ಕೆ ಏಕೆ ಕಳುಹಿಸಿದಿರಿ?': ಕಾಂಗ್ರೆಸ್‌ ಟ್ವಿಟರ್‌ ಅಭಿಯಾನ - ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ

ಜನರ ಜೀವ ರಕ್ಷಣೆ ಮಾಡುವ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಎಡವಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಮಹತ್ವದ ಹೋರಾಟ ಆರಂಭಿಸಿದ್ದಾರೆ.

Rahul campaign
ರಾಹುಲ್ ಹೊಸ ಅಭಿಯಾನ

By

Published : May 17, 2021, 6:52 AM IST

ಬೆಂಗಳೂರು:ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಪಿಕ್‌ನಲ್ಲಿ, “ಮೋದಿಜೀ, ನಮ್ಮ ಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಏಕೆ ಕಳುಹಿಸಿದ್ದೀರಿ?’ ಎಂದು ಪ್ರಶ್ನಿಸುವ ನುಡಿ ಹಾಕಿಕೊಂಡಿದ್ದಾರೆ. ಇದಕ್ಕೆ ಕಪ್ಪು ಬಣ್ಣದ ಬ್ಯಾಗ್ರೌಂಡ್‌ ನೀಡಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚೇಂಜ್ ಮಾಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ತಮ್ಮ ಭಾವಚಿತ್ರ ಬದಲು ಈ ಅಭಿಯಾನದ ಬರಹಕ್ಕೆ ಪ್ರೊಫೈಲ್ ಪಿಕ್ ಬದಲಿಸಿಕೊಳ್ಳುತ್ತಿದ್ದಾರೆ.

ಕೊರೊನಾ ಲಸಿಕೆ ಪೂರೈಕೆ, ಜನರ ಜೀವ ರಕ್ಷಣೆ, ಆಮ್ಲಜನಕ ಪೂರೈಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಎಡವಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಈ ಒಂದು ಮಹತ್ವದ ಹೋರಾಟ ಆರಂಭಿಸಿದ್ದು, ಎಲ್ಲಾ ರಾಜ್ಯದ ಕಾಂಗ್ರೆಸ್ ನಾಯಕರಿಂದ ಬೆಂಬಲ ವ್ಯಕ್ತವಾಗುತ್ತಿದೆ.

ABOUT THE AUTHOR

...view details