ಬೆಂಗಳೂರು: ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು ಈಗ ಹಾದಿಬೀದಿಯಲ್ಲಿ ನಿಂತು ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಕಿಡಿ ಕಾರಿದೆ.
ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದ್ದಲ್ಲ, ಕಂಡವರ ಭೂಮಿಗೆ ಬೇಲಿ ಸುತ್ತುವುದಲ್ಲ, ಪುಡಿ ರೌಡಿಗಳ ಗುಂಪು ಕಟ್ಟಿಕೊಂಡು ಸರ್ಕಾರಿ ಕಾರ್ಯಕ್ರಮದಲ್ಲಿ ದಾಂಧಲೆ ಸೃಷ್ಟಿಸುವುದೂ ಅಲ್ಲ. ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು ಈಗ ಹಾದಿಬೀದಿಯಲ್ಲಿ ನಿಂತು ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದಲ್ಲ, ಕಂಡವರ ಭೂಮಿಗೆ ಬೇಲಿ ಸುತ್ತುವುದಲ್ಲ, ಪುಡಿ ರೌಡಿಗಳ ಗುಂಪು ಕಟ್ಟಿಕೊಂಡು ಸರ್ಕಾರಿ ಕಾರ್ಯಕ್ರಮದಲ್ಲಿ ದಾಂಧಲೆ ಸೃಷ್ಟಿಸುವುದೂ ಅಲ್ಲ. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವ ಡಿ.ಕೆ.ಸುರೇಶ್ ಅವರೇ, ನಿಮ್ಮ 50 ವರ್ಷದ ರಾಷ್ಟ್ರೀಯ ಯುವ ನಾಯಕ ಚೀನಾ ದೇಶದ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿ ಬಂದರಲ್ಲ, ಅದು ಯಾವ ವಿದೇಶಾಂಗ ನೀತಿ ಎಂದು ಪ್ರಶ್ನಿಸಿದೆ.
ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ನೆರೆ ರಾಷ್ಟ್ರದ ಜೊತೆಗೆ ಗುಪ್ತ ಒಡನಾಟ ಇಟ್ಟುಕೊಳ್ಳುವ ಬಗ್ಗೆ ನಿಮ್ಮ ನಿಲುವೇನು?, ರಾಹುಲ್ ಗಾಂಧಿಯವರು ಚೀನಾ ಜೊತೆ ಒಪ್ಪಂದವೊಂದಕ್ಕೆ ಮಾಡಿದ ಸಹಿ ಯಾವ ವಿಚಾರಕ್ಕೆ, ಕನಕಪುರದ ಬಂಡೆ ಮಕ್ಕಳು ಕದ್ದು ಸಂಗ್ರಹಿಸಿರುವ ಗ್ರಾನೈಟ್ ಕಲ್ಲಿನ ರಫ್ತಿಗೆ ಚೀನಾ ಜೊತೆ ಮಾಡಿಕೊಂಡ ಒಡಂಬಡಿಕೆ ಅದಾಗಿರಬಹುದೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಬಜೆಟ್ ಪೂರ್ವ ಸಭೆ: ವಾಣಿಜ್ಯ ಮತ್ತು ಕೈಗಾರಿಕೆ ಸಂಘ - ಸಂಸ್ಥೆಗಳು ಹಾಗೂ ಸಾರಿಗೆ ಸಂಘ ಸಂಸ್ಥೆಗಳ ಮನವಿ ಏನು?