ಕರ್ನಾಟಕ

karnataka

ETV Bharat / state

ಪರಿಷತ್​ಗೆ ಸಚಿವರು ಗೈರು: ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಸಮಾಧಾನ

ಇಂದು ಸದನಕ್ಕೆ ಹಾಜರಾಗದೇ ಮಂತ್ರಿಗಳು ಗೈರಾದ ಹಿನ್ನೆಲೆ ಪರಿಷತ್​ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಗರಂ ಆಗಿದ್ದರು. ಹೀಗೆ ಆದರೆ ಚರ್ಚೆ ಹೇಗೆ ಆಗುತ್ತದೆ, ಸೂಕ್ತ ಉತ್ತರ ಕೊಡುವವರು ಯಾರು? ಸದನ ಹೇಗೆ ನಡೆಯುತ್ತದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

SR patil outrage against ministers obsent for session
ಎಸ್.ಆರ್.ಪಾಟೀಲ್ ಅಸಮಾಧಾನ

By

Published : Mar 5, 2021, 2:16 PM IST

ಬೆಂಗಳೂರು: ಸದನ ಆರಂಭವಾಗಿದೆ, ಆದರೆ ಸದನದಲ್ಲಿ ಚರ್ಚೆ ಮಾಡಲು ಮಂತ್ರಿಗಳು ಇಲ್ಲ, ಮೂವರು ಮಂತ್ರಿ ಇದ್ದಾರೆ ಹೀಗೆ ಆದರೆ ಚರ್ಚೆ ಹೇಗೆ ಆಗುತ್ತದೆ, ಸೂಕ್ತ ಉತ್ತರ ಕೊಡುವವರು ಯಾರು? ಸದನ ಹೇಗೆ ನಡೆಯುತ್ತದೆ ಎಂದು ಸರ್ಕಾರವನ್ನು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪ್ರಶ್ನಿಸಿದರು.

ಎಸ್.ಆರ್.ಪಾಟೀಲ್ ಅಸಮಾಧಾನ
ಸದನ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಎಸ್.ಆರ್.ಪಾಟೀಲ್, ಒಂದು ಕಡೆ ಮಂತ್ರಿಗಳು ಇಲ್ಲ, ಅಧಿಕಾರಿಗಳು ಇಲ್ಲ ಏನ್ ಇದು? ನನಗೆ ಏನೂ ಅರ್ಥವಾಗ್ತಿಲ್ಲ. ಸದನಕ್ಕಿಂತ ಮುಖ್ಯವಾದ ಕೆಲಸ ಏನಿರುತ್ತೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶ ಮಾಡಿ ನಾವು ಉತ್ತರ ಕೊಡುತ್ತೇವೆ, ಕೆಲ ಸಚಿವರು ಬಂದಿಲ್ಲ. ಬರುತ್ತಾರೆ, ಬೇಕು ಅಂತ ಯಾರು ಸದನಕ್ಕೆ ಗೈರು ಆಗಲ್ಲ ಎಂದರು. ಇದಕ್ಕೆ ಒಪ್ಪದ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ‌ಪಾಟೀಲ್ ನಾನು ಗಮನಿಸಿರುವೆ ಸಚಿವರು ಸರಿಯಾಗಿ ಹಾಜರ್ ಆಗಲ್ಲ ಎಂದರು.
ಇದಕ್ಕೆ ಪ್ರತಿಯಾಗಿ ಹಿಂದೆ ನಾವು ಸಚಿವರು ಇಲ್ಲದೇ ಇರುವ ವೇಳೆ ಸಹಕಾರ ಕೊಟ್ಟಿದ್ದೆವು ಸಚಿವರು ಬೇಕು ಅಂತ ಗೈರು ಆಗಿಲ್ಲ, ನೀವು ಹೇಳಿದ ಹಾಗೇ ಸಚಿವರು ಇರಬೇಕು ಎನ್ನುವುದು ಸತ್ಯ ಮುಂದೆ ಹೀಗೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದರು. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶ ಮಾಡಿ ನಾಳೆಯಿಂದ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಭಾನಾಯಕರಿಗೆ ಸೂಚನೆ ನೀಡಿ, ಕಲಾಪ ಆರಂಭಕ್ಕೆ ಸಹಕಾರ ನೀಡುವಂತೆ ಎಸ್ ಆರ್ ಪಾಟೀಲ್ ಗೆ ಮನವಿ ಮಾಡಿ ಕಲಾಪ ಆರಂಭಿಸಿದರು.

ABOUT THE AUTHOR

...view details