ಬೆಂಗಳೂರು :ಬಿಐಎಎಲ್ನ ಸಂಚಾರಿ ಕ್ಯಾಬಿನ್‍ಗಳು ನಗರ ಪೊಲೀಸ್ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ ನೀಡುವುದಲ್ಲದೇ, ವಿಶ್ರಾಂತಿಗಾಗಿ ಸ್ಥಳಾವಕಾಶ ಪೂರೈಸಲಿವೆ. ಯೋಜನಾತ್ಮಕವಾಗಿ ಏಳು ಪ್ರಮುಖ ಸ್ಥಳಗಳಲ್ಲಿ ಇವುಗಳನ್ನು ಇರಿಸಲಾಗುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಸಂಸ್ಥೆಯು, ನಗರ ಪೊಲೀಸರಿಗೆ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಉಪಕ್ರಮದ ಅಡಿ ಏಳು ಸಂಚಾರಿ ಕ್ಯಾಬಿನ್‍ಗಳನ್ನು ದಾನವಾಗಿ ನೀಡಿದೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಬೆಂಬಲದೊಂದಿಗೆ ಈ ಅನನ್ಯ ಚಿಂತನೆಯ ಉಪಕ್ರಮವನ್ನು ರೂಪಿಸಲಾಗಿತ್ತು.
ಈ ಕ್ಯಾಬಿನ್‍ಗಳನ್ನು ನಗರದ ಯೋಜನಾತ್ಮಕವಾಗಿ ಸ್ಥಳಗಳಲ್ಲಿ ಇರಿಸಿದ್ದು, ಪೊಲೀಸ್ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ ನೀಡುವುದಲ್ಲದೇ ಜನದಟ್ಟಣೆಯ ಅವಧಿಗಳಲ್ಲಿ ಸರಾಗವಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ನಾಗರಿಕರು ಪೊಲೀಸರೊಂದಿಗೆ ಸುಲಭವಾಗಿ ಸಂಪರ್ಕ ಹೊಂದುವ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಇವುಗಳನ್ನು ದಾನವಾಗಿ ನೀಡಲಾಗಿದೆ.
ಪ್ರತಿ ಕ್ಯಾಬಿನ್‍ನಲ್ಲಿ ಸಭೆ ನಡೆಸುವ ಪ್ರದೇಶ ಇದ್ದು, ಜೊತೆಗೆ ನಾಲ್ಕು ಬಂಕರ್ ಬೆಡ್‍ಗಳು ಮತ್ತು ವಾಷ್‍ರೂಮ್ ಇರುತ್ತವೆ. ಸುಧಾರಿಸಿಕೊಂಡು ಚೇತರಿಕೆಯೊಂದಿಗೆ ಕರ್ತವ್ಯಕ್ಕೆ ಮರಳಲು ಪೊಲೀಸ್ ಸಿಬ್ಬಂದಿಗೆ ಇವು ಸಹಾಯ ಮಾಡಲಿವೆ. ಈ ಕ್ಯಾಬಿನ್‍ಗಳು ವಿದ್ಯುತ್ ಮಿತವ್ಯಯದ ಎಲ್‍ಇಡಿ ದೀಪಗಳು, ಸೀಲಿಂಗ್ ಫ್ಯಾನ್‍ಗಳು, ಎಲೆಕ್ಟ್ರಿಕ್ ಸಾಕೆಟ್‍ಗಳಿಂದ ಚಾಲಿತವಾಗಿವೆ.