ಬೆಂಗಳೂರು: ಸದನದಲ್ಲಿ ಮಾಸ್ಕ್ ಧರಿಸಿಯೇ ಮಾತನಾಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಸದಸ್ಯರಿಗೆ ಸೂಚಿಸಿದರು.
ಸಚಿವರಿಗೆ ಮಾಸ್ಕ್ ಧರಿಸಿ ಮಾತನಾಡಲು ಸ್ಪೀಕರ್ ಮನವಿ - bangalore latest news
ಸಚಿವ ಮಾಧುಸ್ವಾಮಿ ಮಾಸ್ಕ್ ಧರಿಸದೆ ಮಾತನಾಡುತ್ತಿದ್ದರು. ಈ ಹಿನ್ನೆಲೆ ಮಾಸ್ಕ್ ಧರಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಎಲ್ಲಾ ಸದಸ್ಯರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರು.
ನಿನ್ನೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಸದನದಲ್ಲಿ ಸಂತಾಪ ಸೂಚಿಸಿ ಮಾತನಾಡುತ್ತಿದ್ದ ಕಾನೂನು ಸಚಿವ ಮಾಧುಸ್ವಾಮಿ ಮಾಸ್ಕ್ ಧರಿಸಿರಲಿಲ್ಲ. ಹಾಗಾಗಿ ಇದನ್ನು ಗಮನಿಸಿದ ಕಾಗೇರಿ, ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.
ಇದಕ್ಕೆ ಅಕ್ಕಪಕ್ಕ ಯಾರೂ ಇಲ್ಲ ಮಾಸ್ಕ್ ಹಾಕಿಕೊಂಡು ಮಾತನಾಡುವ ಅಗತ್ಯವಿಲ್ಲ ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಅದಕ್ಕೆ ಒಪ್ಪದ ಸ್ಪೀಕರ್, ಮಾಸ್ಕ್ ಧರಿಸಿಯೇ ಮಾತನಾಡಬೇಕು ಎಂದು ಸೂಚಿಸಿದಾಗ ಮಾಧುಸ್ವಾಮಿ ಮಾಸ್ಕ್ ಧರಿಸಿ ಮಾತನಾಡಲು ಆರಂಭಿಸಿದರು. ಅದೇ ರೀತಿ ಎಲ್ಲಾ ಸದಸ್ಯರು ಮಾಸ್ಕ್ ಹಾಕಿಕೊಂಡೇ ಮಾತನಾಡುವಂತೆ ಸ್ಪೀಕರ್ ಮನವಿ ಮಾಡಿದರು.