ಬೆಂಗಳೂರು: ಗುಜರಿ ವಸ್ತುಗಳ ಹರಾಜಿನಿಂದ ನೈರುತ್ಯ ರೈಲ್ವೆಗೆ 100ಕೋಟಿ ಲಾಭ ಬಂದಿದೆ. ಕಳೆದ ಏಪ್ರಿಲ್ನಿಂದ ಡಿಸೆಂಬರ್ ವರೆಗೆ 6.680 ಕೋಟಿ ರೂ. ಮೌಲ್ಯದ ಗುಜರಿ ಹರಾಜಿನ ಮಾರಾಟದಿಂದ ಹುಬ್ಬಳ್ಳಿ ವಿಭಾಗವು ಹೊಸ ದಾಖಲೆ ನಿರ್ಮಿಸಿದೆ.
ಈ ಕುರಿತು ಪ್ರಧಾನ ವ್ಯಸ್ಥಾಪಕ ಸಂಜೀವ್ ಕಿಶೋರ್ ಮಾತಾನಾಡಿ, ಮಾರ್ಚ್ 2022ರ ವೇಳೆಗೆ ನೈಋತ್ಯ ರೈಲ್ವೆ 150 ಕೋಟಿ ರೂ. ಗೂ ಹೆಚ್ಚಿನ ಮೊತ್ತದ ಮಾರಾಟವನ್ನು ಸಾಧಿಸುವ ವಿಶ್ವಾಸವಿದೆ. ನೈಋತ್ಯ ರೈಲ್ವೆ ಗುಜರಿ ವಸ್ತುಗಳ ಸಂಗ್ರಹಣೆ ಹಾಗೂ ವಿಲೇವಾರಿಗೆ ವ್ಯವಸ್ಥಿತ ನಿರ್ವಹಣಾ ಪದ್ಧತಿಯನ್ನು ಅನುಸರಿಸುತ್ತಾ ಬಂದಿದೆ. ಗುಜರಿ ವಸ್ತುಗಳ ವಿಲೇವಾರಿಯನ್ನು ಆನ್ಲೈನ್ ಹರಾಜಿನ (ಇ ಆಕ್ಷನ್) ಮೂಲಕ ನಡೆಸಲಾಗುವುದು. ಇದರಲ್ಲಿ ದೇಶಾದ್ಯಂತ ಗುಜರಿ ವ್ಯಾಪಾರಿಗಳು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಗುಜರಿ ವಸ್ತುಗಳ ಹರಾಜಿನಿಂದ ರೈಲ್ವೆಗೆ ಬಂತು 100 ಕೋಟಿ ರೂ. ಲಾಭ ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ
ಕೋವಿಡ್-19ರ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಭಾರತೀಯ ರೈಲ್ವೆ ಗುಜರಿವಸ್ತುಗಳ ಸಂಗ್ರಹಣೆಗೆ ಒತ್ತು ನೀಡಿ ಅವುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ 150 ಕೋಟಿ ರೂ. ಮಾರಾಟ ಸಾಧಿಸಿ ಇಂದಿನವರೆಗಿನ ದಾಖಲೆಯನ್ನು ಮೀರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇನ್ನು ಹುಬ್ಬಳ್ಳಿ ವಿಭಾಗವು 6.68 ಕೋಟಿ ರೂ. ಮೌಲ್ಯದ ಗುಜರಿ ವಸ್ತುಗಳ ಮಾರಾಟವನ್ನು ಮಾಡಿದ್ದು, ಇದು ನೈಋತ್ಯ ರೈಲ್ವೆಯ ಒಂದೇ ದಿನದ ಮಾರಾಟದ ಸಾರ್ವಕಾಲಿಕ ದಾಖಲೆಯಾಗಿದೆ. ಈ ಹಿಂದೆ ರೂ. 4.18ಕೋಟಿ ಮೌಲ್ಯದ ಮಾರಾಟ ಅತ್ಯುತ್ತಮ ದಾಖಲೆಯಾಗಿತ್ತು. ಇಂದಿನ ಮಾರಾಟದೊಂದಿಗೆ ಪ್ರಸ್ತುತ ಹಣಕಾಸು ವರ್ಷದಲ್ಲಿ (2021-22) ನಾವು 100 ಕೋಟಿ ರೂ. ಮಾರಾಟದ ಮೊತ್ತವನ್ನು ದಾಟಿದ್ದೇವೆ ಅಂದರು.
ಗುಜರಿ ವಸ್ತುಗಳ ಹರಾಜಿನಿಂದ ರೈಲ್ವೆಗೆ ಬಂತು 100 ಕೋಟಿ ರೂ. ಲಾಭ