ಬೆಂಗಳೂರು: 18 ವರ್ಷಕೊಮ್ಮೆ ವಿಶೇಷ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು, ಈ ಕಾರಣಕ್ಕೆ ನಗರದ ದೇಗುಲಗಳಲ್ಲಿ ವಿಶೇಷ ಹೋಮ ಹವನ ಕಾರ್ಯ ನಡೆಯುತ್ತಿದೆ.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಈಶ್ವರನಿಗೆ ವಿಶೇಷ ಅಭಿಷೇಕ ಮಾಡಿದ್ದು, ನವಗ್ರಹ, ಪರಿವಾರ ದೇವತೆಗಳಿಗೂ ಗ್ರಹಣ ಪೂರ್ವ ಜಲಾಭಿಷೇಕ ಮಾಡಲಾಯಿತು. ಗ್ರಹಣ ನಡೆಯುವಷ್ಟು ಸಮಯವೂ ನಿರಂತರ ಜಪ ನಡೆಯಲಿದ್ದು, ಗ್ರಹಣ ಕಳೆದ ನಂತರ ದೇವಸ್ಥಾನ ಶುದ್ಧೀಕರಣ, ಪೂಜೆ, ಮಂಗಳಾರತಿ ಮಾಡಲಾಗುತ್ತದೆ.
ಗ್ರಹಣಕ್ಕೂ ಮುನ್ನ ಬೆಂಗಳೂರಿನ ದೇವಾಲಯಗಳಲ್ಲಿ ಕೇತು, ಸೂರ್ಯನ ಶಾಂತಿಗಾಗಿ ನವಗ್ರಹ ಹೋಮ ಈಗಾಗಲೇ ದೇವಸ್ಥಾನದಲ್ಲಿ ಕೇತು, ಸೂರ್ಯನ ಶಾಂತಿಗಾಗಿ ನವಗ್ರಹ ಹೋಮ ನಡೆಯುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೋಮಹವನ ಮುಗಿಯಲಿದ್ದು ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಈಗಾಗಲೇ ಎಲ್ಲಾ ಕಡೆ ದರ್ಬೆ ಹುಲ್ಲು ಹಾಕಲಾಗಿದ್ದು, ಮಧ್ಯಾಹ್ನ 3 ಗಂಟೆಯ
ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲೂ ಯಾವುದೇ ಪೂಜೆ ಪುನಸ್ಕಾರ ಇಲ್ಲದೇ ಈಗಾಗಲೇ ಸ್ವಚ್ಛ ವಸ್ತ್ರಗಳಿಂದ ಗರ್ಭಗುಡಿಯನ್ನು ಮುಚ್ಚಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧ ಮಾಡಲಾಗಿದೆ.