ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇಂದು ಬಹುಕೋಟಿ ವಂಚಕ ಮನ್ಸೂರ್ಗೆ ಸೇರಿದ ಕಂಪನಿಗಳ ಮೇಲೆ ದಾಳಿ ಮಾಡಿದ್ದಾರೆ.
ಐಎಂಎಗೆ ಸೇರಿದ ಕಂಪನಿಗಳ ಮೇಲೆ ಮುಂದುವರೆದ ಎಸ್ಐಟಿ ರೇಡ್... - company
ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇಂದು ಮನ್ಸೂರ್ಗೆ ಸೇರಿದ ಕಂಪನಿಗಳ ಮೇಲೆ ದಾಳಿ ನಡೆಸಿದ್ದಾರೆ.
ಐಎಂಎಗೆ ಸಂಬಂಧಿಸಿದ ಫ್ರಂಟ್‌ಲೈನ್ ಸೆಂಟ್ರಲ್ ವೇರ್ ಹೌಸ್ ಮಳಿಗೆ ಸೇರಿದಂತೆ ನಗರದಲ್ಲಿರುವ 21 ಮೆಡಿಸಿನ್ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಔಷಧಿ, ಔಷಧಿ ಉಪಕರಣಗಳು ಹಾಗೂ ಸೌಂದರ್ಯವರ್ಧಕ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ.ದಾಳಿ ವೇಳೆ 15 ಲಕ್ಷ ಮೌಲ್ಯದ ಸುಗಂಧ ದ್ರವ್ಯಗಳು, ಬಟ್ಟೆ, ಬ್ಯಾಗ್, ಜರ್ಕೀನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಒಂದು ಕೋಟಿ ಮೌಲ್ಯದ ಔಷಧಿಗಳು, ಒಂದು ಟಾಟಾ ಏಸ್ ವಾಹನ ಸೇರಿ ಹಲವು ಬಗೆಯ ವಿದ್ಯುನ್ಮಾನ ಉಪಕರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಮನ್ಸೂರ್ಗೆ ಸೇರಿದ ಗೃಹೋಪಯೋಗಿ, ದಿನಸಿ ಅಂಗಡಿಗಳು ಹಾಗೂ ಮಾಲ್ಗಳ ಮೇಲೆ ರೇಡ್ ಮಾಡಿ ಜಪ್ತಿ ಮಾಡಿದ್ದಾರೆ.