ಕರ್ನಾಟಕ

karnataka

ETV Bharat / state

ಸಿದ್ದು ಸಂಪುಟದ ಖಾತೆ ಹಂಚಿಕೆ: ಪರಮೇಶ್ವರ್​ಗೆ ಗೃಹ, ಡಿಕೆಶಿಗೆ ಜಲ, ಜಾರ್ಜ್​ಗೆ ಇಂಧನ... ಖರ್ಗೆಗೆ ಯಾವ ಖಾತೆ? - ನೂತನ ಸಚಿವರ ಪ್ರಮಾಣ ವಚನ

ನೂತನ ಸಚಿವರ ಪ್ರಮಾಣ ವಚನ ಬೆನ್ನಲ್ಲೇ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಈ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ.

Ministers portfolio
ಸಿದ್ದು ಸಂಪುಟದ ಖಾತೆ ಹಂಚಿಕೆ: ಪರಮೇಶ್ವರ್​ಗೆ ಗೃಹ, ಡಿಕೆಶಿಗೆ ಜಲ, ಜಾರ್ಜ್​ಗೆ ಇಂಧನ... ಖರ್ಗೆಗೆ ಯಾವ ಖಾತೆ?

By

Published : May 27, 2023, 2:03 PM IST

Updated : May 27, 2023, 3:00 PM IST

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಗೃಹ ಖಾತೆಯನ್ನು ಡಾ. ಜಿ ಪರಮೇಶ್ವರ್ ಅವರಿಗೆ ನೀಡಲಾಗಿದೆ. ಹಿರಿಯ ಸಚಿವರಾದ ಎಂಬಿ ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ, ಹೆಚ್​ಕೆ ಪಾಟೀಲ್ ಅವರಿಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆ ಮಾಡಲಾಗಿದೆ.

ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯ ಪಟ್ಟಿ ಈಟಿವಿ ಭಾರತ್​ಗೆ ಲಭ್ಯವಾಗಿದೆ. ಈ ಖಾತೆ ಹಂಚಿಕೆಯ ಪಟ್ಟಿಗೆ ಪಕ್ಷದ ಹೈಕಮಾಂಡ್ ಸಹ ತನ್ನ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ. ಹೆಚ್ಚಿನ ಸಚಿವರಿಗೆ ಅವರು ನಿರೀಕ್ಷಿಸಿದ ಖಾತೆಗಳು ದೊರೆತಿಲ್ಲ. ಆದರೆ ಕಲವರಿಗೆ ನಿರೀಕ್ಷೆಗೂ ಮೀರಿದ ಉತ್ತಮ ಖಾತೆಗಳು ಲಭ್ಯವಾಗಿವೆ. ಸಚಿವರಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳ ಪಟ್ಟಿಯನ್ನು ಇಂದು ಸಂಜೆ ಮುಖ್ಯಮಂತ್ರಿ ರಾಜಭವನಕ್ಕೆ ಕಳಿಸಿಕೊಡಲಿದ್ದಾರೆ. ಸಚಿವರಿಗೆ ನೀಡಲಾಗಿರುವ ಖಾತೆಗಳ ವಿವರ ಹೀಗಿದೆ.

  • ಸಿಎಂ ಸಿದ್ದರಾಮಯ್ಯ - ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು
  • ಡಾ.ಜಿ ಪರಮೇಶ್ವರ - ಗೃಹ ಖಾತೆ
  • ಡಿಸಿಎಂ ಡಿಕೆ ಶಿವಕುಮಾರ್ - ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ.. ಇತ್ಯಾದಿ)
  • ಎಂಬಿ ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  • ಕೆಹೆಚ್ ಮುನಿಯಪ್ಪ - ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  • ಕೆಜೆ ಜಾರ್ಜ್ - ಇಂಧನ
  • ಜಮೀರ್ ಅಹ್ಮದ್ - ವಸತಿ ಮತ್ತು ವಕ್ಫ್
  • ರಾಮಲಿಂಗಾರೆಡ್ಡಿ - ಸಾರಿಗೆ
  • ಸತೀಶ ಜಾರಕಿಹೊಳಿ - ಲೋಕೋಪಯೋಗಿ
  • ಪ್ರಿಯಾಂಕ್ ಖರ್ಗೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಐಟಿ ಬಿಟಿ
  • ಹೆಚ್​ಕೆ ಪಾಟೀಲ್ - ಕಾನೂನು ಮತ್ತು ಸಂಸದೀಯ ವ್ಯವಹಾರ
  • ಕೃಷ್ಣ ಭೈರೇಗೌಡ - ಕಂದಾಯ
  • ಚೆಲುವರಾಯಸ್ವಾಮಿ - ಕೃಷಿ
  • ಕೆ. ವೆಂಕಟೇಶ್ - ಪಶುಸಂಗೋಪನೆ ಮತ್ತು ರೇಷ್ಮೆ
  • ಡಾ. ಮಹದೇವಪ್ಪ - ಸಮಾಜ ಕಲ್ಯಾಣ
  • ಈಶ್ವರ ಖಂಡ್ರೆ - ಅರಣ್ಯ
  • ಕೆಎನ್ ರಾಜಣ್ಣ - ಸಹಕಾರ
  • ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಶರಣ ಬಸಪ್ಪ ದರ್ಶನಾಪೂರ - ಸಣ್ಣ ಕೈಗಾರಿಕೆ
  • ಶಿವಾನಂದ ಪಾಟೀಲ್ - ಜವಳಿ ಮತ್ತು ಸಕ್ಕರೆ
  • ಆರ್​ಬಿ ತಿಮ್ಮಾಪುರ - ಅಬಕಾರಿ ಮತ್ತು ಮುಜರಾಯಿ
  • ಎಸ್​ಎಸ್ ಮಲ್ಲಿಕಾರ್ಜುನ - ಗಣಿಗಾರಿಕೆ ಮತ್ತು ತೋಟಗಾರಿಕೆ
  • ಶಿವರಾಜ ತಂಗಡಗಿ - ಹಿಂದುಳಿದ ವರ್ಗಗಳ ಕಲ್ಯಾಣ
  • ಡಾ. ಶರಣ ಪ್ರಕಾಶ್ ಪಾಟೀಲ್ - ಉನ್ನತ ಶಿಕ್ಷಣ
  • ಮಂಕಾಳೆ ವೈದ್ಯ - ಮೀನುಗಾರಿಕೆ
  • ಲಕ್ಷ್ಮಿ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ರಹೀಂ ಖಾನ್ - ಪೌರಾಡಳಿತ
  • ಡಿ ಸುಧಾಕರ್ - ಯೋಜನೆ ಮತ್ತು ಸಾಂಖಿಕ ಇಲಾಖೆ
  • ಸಂತೋಷ್ ಲಾಡ್ - ಕಾರ್ಮಿಕ
  • ಭೋಸರಾಜ್ - ಸಣ್ಣ ನೀರಾವರಿ
  • ಭೈರತಿ ಸುರೇಶ್ - ನಗರಾಭಿವೃದ್ಧಿ
  • ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಡಾ. ಎಂಸಿ ಸುಧಾಕರ್ - ವೈದ್ಯಕೀಯ ಶಿಕ್ಷಣ
  • ಬಿ ನಾಗೇಂದ್ರ - ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ
Last Updated : May 27, 2023, 3:00 PM IST

ABOUT THE AUTHOR

...view details