ಬೆಂಗಳೂರು:ಜಾತಿ ಗಣತಿ ವರದಿಗಾಗಿ ಸಿದ್ದರಾಮಯ್ಯ ಕೋಟಿ ಕೋಟಿ ರೂ ಖರ್ಚು ಮಾಡಿದ್ದಾರೆ. ಆದರೆ ಅದರ ಅನುಷ್ಠಾನ ಮಾತ್ರ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಟೀಕಿಸಿದ್ರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಏಕೆ ಜಾತಿ ಗಣತಿ ವರದಿ ಅನುಷ್ಠಾನ ಮಾಡಿಲ್ಲ. ನಾನು ಜಾತಿ ಗಣತಿಗೆ ದುಡ್ಡು ಕೊಟ್ಟೆ ಅಂತಾರೆ. ಅಷ್ಟು ಖರ್ಚು ಮಾಡಿ ಈಗ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಅವರು ಯಾವ ಹಿಂದುಳಿದ ವರ್ಗದವರು? ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೇಳುವುದೆಲ್ಲ ಸತ್ಯ ಆಗಲ್ಲ. ಹಿಂದುಳಿದ ನಾಯಕ ಅಂತಾರಲ್ಲ. ದೇವರಾಜು ಅರಸು ಬಿಟ್ಟರೆ ನಾನೇ ಇರೋದು ಅಂತಾರಲ್ಲ. ಅವರೇ ಜಾತಿಗಣತಿ ವರದಿಯನ್ನು ಏಕೆ ಜಾರಿ ಮಾಡಿಲ್ಲ. ಯಾರು ಕೂಸು ಹುಟ್ಟಿಸಿದರೋ ಅವರೇ ಜಾರಿ ಮಾಡಬೇಕಾಗಿತ್ತು. ಆದರೆ ಅವರೇ ಮಾಡಿಲ್ಲ. ಲಕ್ಷಾಂತರ ರೂಪಾಯಿ ಸಂಬಳ ಕೊಟ್ಟು, ಜಾತಿಗಣತಿ ಮಾಡಿಸಿದರು. ಅದರ ಫಲಿತಾಂಶ ಏನು? ಇದರ ಪ್ರಯೋಜನ ಏನು? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಜಾತಿ ಗಣತಿ ವರದಿ ಅನುಷ್ಠಾನ ಜಾರಿ ಮಾಡುತ್ತಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಏಕೆ ಜಾರಿಯಾಗಿಲ್ಲ ಎಂಬ ಬಗ್ಗೆ ನೋಡಬೇಕು. ವರದಿಯ ಅಧ್ಯಯನ ಮಾಡಿ ಅದರ ಸಾಧಕ ಬಾಧಕ ಪರಿಶೀಲಿಸಿ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
'ತಾತ್ಸಾರ ಮಾಡಬಾರದು'
ಕರ್ನಾಟಕದ ಜನತೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಅದೇ ರೀತಿ ನಮ್ಮ ವರಿಷ್ಠರು jepd/o ಸರ್ವತೋಮುಖ ಅಭಿವೃದ್ಧಿಗೆ ಮಹತ್ವ ಕೊಡಬೇಕು ಎಂಬುದಕ್ಕೆ ನನ್ನ ಸಹಮತವೂ ಇದೆ ಎಂದು ಇದೇ ವೇಳೆ ತಿಳಿಸಿದರು.