ಕರ್ನಾಟಕ

karnataka

ETV Bharat / state

ಶಿವಾಜಿನಗರ ಬೈ ಎಲೆಕ್ಷನ್: ಚುನಾವಣಾ ಆಯೋಗದಿಂದ ಭರದ ಸಿದ್ದತೆ

ಶಿವಾಜಿನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಸ್ಟರಿಂಗ್ ಸೆಂಟರ್ ಮೌಂಟ್ ಕಾರ್ಮೆಲ್ ಕಾಲೇಜಿಗೆ ಬಂದ ಚುನಾವಣಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ್ರು.

dfdf
ಶಿವಾಜಿನಗರ ಬೈ ಎಲೆಕ್ಷನ್, ಚುನಾವಣಾ ಆಯೋದಿಂದ ಭರದ ಸಿದ್ದತೆ!

By

Published : Dec 4, 2019, 7:12 PM IST

ಬೆಂಗಳೂರು:ರಾಜ್ಯದ ಗಮನ ಸೆಳೆದಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಕಲ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.

ಶಿವಾಜಿನಗರ ಬೈಎಲೆಕ್ಷನ್, ಚುನಾವಣಾ ಆಯೋಗದಿಂದ ಭರದ ಸಿದ್ದತೆ

ಇಂದಿನಿಂದ ಚುನಾವಣಾ ಸಿಬ್ಬಂದಿ, ಮಸ್ಟರಿಂಗ್ ಸೆಂಟರ್​ನಿಂದ ಹೊರಹೋಗುವಂತಿಲ್ಲ. ಇವಿಎಂ ಪಡೆದು ಮಧ್ಯಾಹ್ನದ ನಂತರ ತಮಗೆ ಹಂಚಿಕೆಯಾದ ಮತಗಟ್ಟೆಗೆ ತೆರಳಬೇಕು. ನಾಳೆ ಚುನಾವಣೆ ಮುಗಿದ ಬಳಿಕ ವಾಪಾಸ್​ ಸ್ಟ್ರಾಂಗ್ ರೂಂಗೆ ಇವಿಎಂಗಳನ್ನು ತಲುಪಿಸಿ, ಕರ್ತವ್ಯದಿಂದ ಹೋಗಬಹುದಾಗಿದೆ. ಈಗಾಗಲೇ ಶಿವಾಜಿನಗರ ಕ್ಷೇತ್ರದ ಮತಗಟ್ಟೆ ಸಂಖ್ಯೆಯನ್ನೂ ಹಂಚಿಕೆ ಮಾಡಲಾಗಿದೆ.

ಶಿವಾಜಿನಗರದಲ್ಲಿ ಒಟ್ಟು 193 ಮತಗಟ್ಟೆಗಳಿದ್ದು,1,93,844 ಒಟ್ಟು ಮತದಾರಿದ್ದಾರೆ. 98,024 ಪುರುಷ, 95,816 ಮಹಿಳಾ ಮತದಾರರಿದ್ದು,04 ಮಂದಿ ಇತರೆ ಮತದಾರರಿದ್ದಾರೆ. ಶಿವಾಜಿನಗರದಲ್ಲಿ 5 ಪಿಂಕ್ ಮತಗಟ್ಟೆಗಳಿದ್ದು, 24 ಸೂಕ್ಷ್ಮ ಹಾಗೂ 61ಅತಿಸೂಕ್ಷ್ಮ ಮತಗಟ್ಟೆಗಳಿವೆ.ಇನ್ನು ಚುನಾವಣಾ ಕರ್ತವ್ಯಕ್ಕೆ 849 ಮಂದಿ ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಮೈಕ್ರೋ ಅಬ್ಸರ್ವರ್ಸ್ 72 ಮಂದಿ ಹಾಗೂ 500 ಪೊಲೀಸ್ ಸಿಬ್ಬಂದಿ,287 ಮಂದಿ ಸಿಆರ್​ಪಿಎಫ್ ಯೋಧರು, 193 ಮಂದಿ ಪಿಎಸ್​ಐಗಳ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್ ಸೆಂಟರ್​ಗೆ ಬೆಂಗಳೂರು ನಗರ ಚುನಾವಣಾ ಆಯುಕ್ತ ಬಿ.ಎಸ್. ಅನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details