ಕರ್ನಾಟಕ

karnataka

By

Published : Aug 4, 2023, 4:21 PM IST

ETV Bharat / state

Shakti Yojana: ಪ್ರತಿದಿನ ಶೇ.1ರಷ್ಟು ಶಕ್ತಿ ಯೋಜನೆ ದುರ್ಬಳಕೆ- ಸಚಿವ ರಾಮಲಿಂಗಾ ರೆಡ್ಡಿ

Shakti Yojana: ಶಕ್ತಿ ಯೋಜನೆ ಜಾರಿಯಾಗಿ 54 ದಿನ ಪೂರೈಸಿದೆ. ಈವರೆಗೂ ಒಟ್ಟು 32.16 ಕೋಟಿ ಮಹಿಳಾ ಪ್ರಯಾಣಿಕರು ಲಾಭ ಪಡೆದಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ
ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಪ್ರತಿ ದಿನ ಶೇ.1 ರಷ್ಟು ಶಕ್ತಿ ಯೋಜನೆ ದುರ್ಬಳಕೆ ಆಗ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ‌ ಹೇಳಿದ್ದಾರೆ. ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, "ಪ್ರತಿ ನಿತ್ಯ 1 ಕೋಟಿ 39 ಲಕ್ಷ ಪ್ರಯಾಣಿಕರು ಓಡಾಟ ಮಾಡ್ತಿದ್ದಾರೆ. ಇದರಲ್ಲಿ ಶೇ.1 ರಷ್ಟು ಮಿಸ್‌ಯೂಸ್ ಆಗ್ತಿದೆ" ಎಂದು ತಿಳಿಸಿದರು.

"749.30 ಕೋಟಿ ರೂ ಮೌಲ್ಯದ ಟಿಕೆಟ್ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಶಕ್ತಿ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೂ ಮೊದಲು 84.91 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಯೋಜನೆ ಜಾರಿಯಾದ ಬಳಿಕ 109.95 ಲಕ್ಷಕ್ಕೆ ಏರಿಕೆಯಾಗಿದೆ" ಎಂದರು.

"ಇದೇ ರೀತಿ ಮುಂದುವರೆದರೆ ಈ ವರ್ಷದ ಅಂತ್ಯದಲ್ಲಿ ಸಾರಿಗೆ ನಿಗಮದ ಸಾಲ ತೀರುತ್ತೆ. ಶಕ್ತಿ ಯೋಜನೆಯಿಂದ ಮುಂದಕ್ಕೆ ಸಾರಿಗೆ ನಿಗಮಗಳಿಗೂ ಲಾಭ ಆಗಲಿದೆ. ಒಟ್ಟು ಸಾರಿಗೆ ನಿಗಮಕ್ಕೆ 4,352 ಕೋಟಿ ರೂಪಾಯಿ ಸಾಲ ಇದೆ. ಶಕ್ತಿ ಯೋಜನೆಯಿಂದ ಪ್ರತಿ ತಿಂಗಳು ನಿಗಮಗಳು ಸಾಲ ತೀರಿಸೋಕೆ ಸಾಧ್ಯ ಆಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಎಲ್ಲ ಸಾಲ ತೀರಿ, ಲಾಭದ ಟ್ರ್ಯಾಕ್​ಗೆ ನಿಗಮಗಳು ಮರಳಲಿದೆ" ಎಂದರು.

"ಹಣಕಾಸು ಇಲಾಖೆ ಯಾವುದೇ ಇಲಾಖೆ ಕೇಳಿದ ತಕ್ಷಣ ಹಣ ಕೊಡುವುದಿಲ್ಲ. ಅವರು ಒಂದಷ್ಟು ಕ್ಲಾರಿಫಿಕೇಷನ್ ಕೇಳಿದ್ದಾರೆ. ಬೊಮ್ಮಯಿ ಸಾಹೇಬ್ರಿಗೆ ತುಂಬ ಆತುರ. ಹೊಸ ಸರ್ಕಾರ ಬಂದಿದೆ ಸ್ವಲ್ಪ ದಿನ ಬಿಡೋಣ ಅನ್ನಲ್ಲ. ನೀರಿಂದ ಮೀನು ಹೊರಗಡೆ ತೆಗೆದು ಹಾಕಿದ್ರೆ ಯಾವ ರೀತಿ ಒದ್ದಾಡುತ್ತೋ, ಆ ರೀತಿ ಬಿಜೆಪಿ ಪಕ್ಷದವರು ವಿಲವಿಲ ಅಂತ ಒದ್ದಾಟ ನಡೆಸುತ್ತಿದ್ದಾರೆ" ಎಂದು ರೆಡ್ಡಿ ಟೀಕಿಸಿದರು.

"ಎಲ್ಲ ನಾಲ್ಕು‌ ನಿಗಮಗಳಲ್ಲೂ ಸರಿಯಾದ ಸಮಯಕ್ಕೆ ಸಂಬಳ ಆಗುತ್ತಿದೆ. ಸಂಬಳ ಸರಿಯಾಗಿ ಕೊಟ್ಟಿಲ್ಲಾಂತ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಸಂಬಳ ಆಗಿರೋದರ ಬಗ್ಗೆ ತಿಂಗಳ ವಿವರ ಬಿಡುಗಡೆ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ, ಜೂನ್ ತಿಂಗಳಲ್ಲಿ ಅರ್ಧ ಹಣ ಬಿಡುಗಡೆ ಮಾಡಲಾಗಿದೆ. ಕೆಲ ಸ್ಪಷ್ಟೀಕರಣ ಆರ್ಥಿಕ ಇಲಾಖೆಯಿಂದ ಕೇಳಲಾಗಿದೆ. ಜುಲೈ ತಿಂಗಳ ಮಾಹಿತಿ ಸೇರಿ ಇಲಾಖೆ ನೀಡಲಾಗುತ್ತದೆ. ಕೆಎಸ್ಆರ್ ಟಿಸಿಯಲ್ಲಿ ಪ್ರತಿ ತಿಂಗಳ 1ರಂದು ವೇತನ ಆಗುತ್ತದೆ. ಬಿಎಂಟಿಸಿ 7 ರಂದು NWKRTC, KKRTCಗೆ 17 ರಂದು ವೇತನ ಆಗುತ್ತದೆ ಎಂದು ಸಚಿವರು ತಿಳಿಸಿದರು.

ಬಿಜೆಪಿ ಕಳೆದ ಐದು ವರ್ಷದಲ್ಲಿ ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳಿಗೆ ಹೊಸ ಬಸ್ ಖರೀದಿ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಮನಸ್ಸಿಗೆ ಬಂದ ದಿನಾಂಕದಂದು ವೇತನ ನೀಡಲಾಗಿತ್ತು. ತಿಂಗಳ ವೇತನ ಮುಂದಿನ ತಿಂಗಳ ಅಂತ್ಯದಲ್ಲಿ ವೇತನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಸಂಬಳ ಎಷ್ಟನೇ ತಾರೀಖಿಗೆ ಹಾಕುತ್ತಿದ್ರು?. NWKRTC ನಿಗಮಕ್ಕೆ ಬಿಜೆಪಿ ಸರ್ಕಾರ ಇದ್ದಾಗ 10ನೇ ತಾರೀಖಿನ ಮೇಲೆ ಸಂಬಳ ಹಾಕುತ್ತಿದ್ರು. ಆದರೆ ಈಗ ನೌಕರರಿಗೆ ಬೇಗ ಸಂಬಳ ಹಾಕಲಾಗುತ್ತಿದೆ ಎಂದರು.

ಇದನ್ನೂ ಓದಿ:ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ತಿಂಗಳೊಳಗೆ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ: ಕೆ ಎಚ್​ ಮುನಿಯಪ್ಪ

ABOUT THE AUTHOR

...view details