ಬೆಂಗಳೂರು:ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ - kannadanews
ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.
ಹೈ-ಟೆನ್ಷನ್ ವೈರ್ ತಗುಲಿ ಇತ್ತೀಚೆಗೆ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕುರುಬರಹಳ್ಳಿ ವೃತ್ತದಲ್ಲಿ ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿ ಪಡೆಯದೇ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಬಿಲ್ಡಿಂಗ್ ಮಾಲೀಕರು ಹಾಗೂ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಿ ಎಫ್‌ಐಆರ್ ದಾಖಲಿಸಬೇಕೆಂದು ಬಿಬಿಎಂಪಿಗೆ ಹಿರಿಯ ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.
ಅಮೃತೇಶ್ ಈಟಿವಿ ಭಾರತ್ ಜೊತೆ ದೂರವಾಣಿಯಲ್ಲಿ ಮಾತನಾಡಿ, ಸಿಟಿಯಲ್ಲಿ ಹೈ-ಟೆನ್ಷನ್ ವೈರ್ ಹಾದು ಹೋದ ಸ್ಥಳದಲ್ಲಿ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಬೇಕಾದರೆ ಬಿಬಿಎಂಪಿ ಹಾಗೂ ವಿದ್ಯುತ್ ಸರಬರಾಜು ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಒಂದು ವೇಳೆ ಮಾಲೀಕರು ಯಾವುದೇ ಅನುಮತಿಯನ್ನು ಪಡೆಯದೆ ಕಟ್ಟಡ ನಿರ್ಮಾಣ ಮಾಡಿದರೆ ಅವಘಡಗಳು ಸಂಭವಿಸುತ್ತದೆ. ಈ ಸಂಬಂಧ ಇತ್ತೀಚೆಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಹೀಗಾಗಿ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ರು.