ಕರ್ನಾಟಕ

karnataka

ETV Bharat / state

ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾದ ಚಿನ್ನಮ್ಮ ಆಸ್ಪತ್ರೆಯತ್ತ ಅಭಿಮಾನಿಗಳ ದಂಡು: ಹರ್ಷಾಚರಣೆ - ವಿಕ್ಟೋರಿಯಾ ಆಸ್ಪತ್ರೆ

ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಸಿದ ಅಪರಾಧದ ಮೇಲೆ ಜೈಲು ಸೇರಿದ್ದ ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್ ಹಾಗೂ ಆಕೆಯ ಆಪ್ತರು ಪರಪ್ಪನ ಅಗ್ರಹಾರದಿಂದ ಇಂದು ಬಿಡುಗಡೆಯಾಗಿದ್ದಾರೆ. ಇತ್ತ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಸಂಭ್ರಮಾಚರಣೆ ಮಾಡಿದರು.

Sashikala Natarajan
ಶಶಿಕಲಾ ನಟರಾಜನ್

By

Published : Jan 27, 2021, 10:13 AM IST

Updated : Jan 27, 2021, 12:40 PM IST

ಬೆಂಗಳೂರು: ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚಿನ್ನಮ್ಮನ ಬಿಡುಗಡೆಯಿಂದ ಖುಷಿಗೊಂಡಿರುವ ಅವರ ಅಭಿಮಾನಿಗಳು ಜಯಲಲಿತಾ ಇರುವ ಬೆಂಗಳೂರು ಮೆಡಿಕಲ್​ ಕಾಲೇಜು ಆಸ್ಪತ್ರೆ ಬಳಿ ಜಮಾಯಿಸಿ, ಹರ್ಷ ವ್ಯಕ್ತಪಡಿಸಿದರು.

ವೈದ್ಯರು ತಿಳಿಸುವವರೆಗೆ ಆಸ್ಪತ್ರೆಯಲ್ಲಿ ಇರಲಿರುವ ಶಶಿಕಲಾ:ಶಶಿಕಲಾ ನಟರಾಜನ್ ಕೊರೋನಾ ಸೋಂಕು ಇನ್ನೂ‌ ಮುಂದುವರೆದಿರುವ ಹಿನ್ನಲೆ‌ ವೈಧ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಬಿಡುಗಡೆ ನಿರ್ಧಾರ ನಿಂತಿದೆ. ನ್ಯಾಯಾಲಯದ ಬಿಡುಗಡೆ ಆದೇಶದಂತೆ ಶರತ್ತುಬದ್ದ ಜಾಮೀನಿನಂತೆ ಹತ್ತು ಕೋಟಿ ಪಾವತಿಸಿದ ಹಿನ್ನೆಲೆ ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣಗೊಂಡಿದ್ದು, ಹೀಗಾಗಿ ಇಂದಿಗೆ ಶಶಿಕಲಾ ಜೈಲು ವಾಸ ಅಂತ್ಯಗೊಳ್ಳಲಿದೆ. ಆದರೆ, ಶಶಿಕಲಾ ಜ್ವರ, ಕಫ, ಕರೋನಾ ಸೋಂಕು ಹಿನ್ನೆಲೆಯಲ್ಲಿ ವೈದ್ಯರ ನಿರ್ಧಾರದ ಬಳಿಕ ಅಲ್ಲಿಂದ ಬಿಡುಗಡೆಗೊಳ್ಳಲಿದ್ದಾರೆ.

ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾದ ಚಿನ್ನಮ್ಮ
ಆಸ್ಪತ್ರೆ ಮುಂದೆ ಜಮಾಯಿಸಿರುವ ಚಿನ್ನಮ್ಮ ಅಭಿಮಾನಿಗಳು

ಹೆಚ್ಚಿನ ಬಂದೋಬಸ್ತ್:ಚಿನ್ನಮ್ಮ ಬಿಡುಗಡೆ ಹಿನ್ನೆಲೆತಮಿಳುನಾಡಿನಿಂದ ಇಂದು ಬೆಂಗಳೂರಿಗೆ ಶಶಿಕಲಾ ಅಭಿಮಾನಿಗಳು ಮತ್ತು ಆಪ್ತರು ಆಗಮಿಸುವ ಹಿನ್ನಲೆ ಬೆಂಗಳೂರು ಮೆಡಿಕಲ್​ ಕಾಲೇಜು ಆಸ್ಪತ್ರೆ ಸುತ್ತ ಹೆಚ್ಚಿನ ಭದ್ರತೆ ನೀಡಲಾಗಿದೆ.

ಹರ್ಷ ವ್ಯಕ್ತಪಡಿಸುತ್ತಿರುವ ಶಶಿಕಲಾ ಅಭಿಮಾನಿಗಳು

ತಮಿಳುನಾಡಿನಲ್ಲಿ ಸಂಭ್ರಮಾಚರಣೆ:ಶಶಿಕಲಾರ ಬಿಡುಗಡೆಗೆ ತಮಿಳುನಾಡಿನಲ್ಲಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿಕೊಂಡಿದ್ದಾರೆ. ಇನ್ನೊಂದೆಡೆ ಚಿನ್ನಮ್ಮ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಬಳಿ ಅವರ ಅಭಿಮಾನಿಗಳು ಸೇರುತ್ತಿದ್ದಾರೆ.

Last Updated : Jan 27, 2021, 12:40 PM IST

ABOUT THE AUTHOR

...view details