ಕರ್ನಾಟಕ

karnataka

ETV Bharat / state

ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ ಸ್ವೀಟ್ ಬ್ರದರ್ ಆಗಿರುವುದು ಹೇಗೆ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ - ಗೃಹ ಸಚಿವ ಆರಗ ಜ್ಞಾನೇಂದ್ರ

ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ?- ಸಚಿವ ಸುಧಾಕರ್ ಅವರೇ, ತಮ್ಮ ಸಿಡಿ ತಡೆಯಾಜ್ಞೆ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರೂ ಆತನ ದಂಧೆಯ ಫಲಾನುಭವಿಯೇ? ಹೀಗೆ ಹಲವಾರು ಪ್ರಶ್ನೆಗಳನ್ನು ಕಾಂಗ್ರೆಸ್ ಸಿಎಂ ಅವರನ್ನು ಪ್ರಶ್ನಿಸಿದೆ.

bjp congress symbol
ಬಿಜೆಪಿ ಕಾಂಗ್ರೆಸ್ ಚಿಹ್ನೆ

By

Published : Jan 7, 2023, 3:26 PM IST

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಪುತ್ರ ಸ್ಯಾಂಟ್ರೋ ರವಿ ಸ್ನೇಹಿತ ಆಗಿದ್ದು ಹೇಗೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರೇ, 'ಸಿಎಂ ನೇರ ಪರಿಚಯ ನನಗೆ' ಎಂದು ರವಿ ಹೇಳಿದ್ದು ಹೇಗೆ? ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ 'ಸ್ವೀಟ್ ಬ್ರದರ್' ಆಗಿರುವುದು ಹೇಗೆ? ನಿಮ್ಮ ಸರ್ಕಾರದ ಬಹುತೇಕ ಸಚಿವರಿಗೆ ಆಪ್ತನಾಗಿರುವ ಸ್ಯಾಂಟ್ರೋ ರವಿ ನಿಮಗೂ ಆಪ್ತನಲ್ಲವೇ? ತಾವು ಆತನಿಗೆ ಸಾರ್ ಎಂದು ಸಂಬೋಧಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಬಿಜೆಪಿ ಸಚಿವರು ಅಪ್ತರು: ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈ ದಂಧೆಗೂ ಸಂಬಂಧವಿದೆಯೇ ಸಚಿವ ಸುಧಾಕರ್ ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? ಎಂದೂ ಕಾಂಗ್ರೆಸ್​ ಪಕ್ಷ ತನ್ನ ಟ್ವೀಟ್​​ನಲ್ಲಿ ಕೇಳಿದೆ.

ಅತಿಥಿ ಗೃಹ ಕುಮಾರಕೃಪ ಹೆಡ್ಡಾಫೀಸ್: ಸರ್ಕಾರಿ ಅತಿಥಿ ಗೃಹ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು? ಬೊಮ್ಮಾಯಿ ಕೃಪೆಯೇ? ಜ್ಞಾನೇಂದ್ರ ಕೃಪೆಯೇ? ವಿಧಾನಸೌಧಕ್ಕೆ 10 ಲಕ್ಷ ತಂದಿದ್ದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಎಂಜಿನಿಯರ್. ಆ ಸಮಯದಲ್ಲಿ ವಿಧಾನಸೌಧದಲ್ಲಿದ್ದಿದ್ದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್. ಬಸವರಾಜ್ ಬೊಮ್ಮಾಯಿ ಅವರೇ, ಶೇ 40ರಷ್ಟು ಕಮಿಷನ್ ಹಣದ ಮೂಲದ ರಹಸ್ಯ ಕಾಪಾಡುತ್ತಿರುವುದೇಕೆ ಸರ್ಕಾರ? ಬೊಮ್ಮಾಯಿ ಅವರೇ, ಇದು ನಿಮ್ಮ ಪೇ-ಸಿಎಂ ಖಾತೆಗೆ ಜಮೆಯಾಗಲು ಬಂದ ಹಣವೇ ಅಥವಾ ಸಚಿವರ ಕಮಿಷನ್ ಪಾಲೇ? ಎಂದು ಕೇಳಿದೆ.

ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ:ಬಿಜೆಪಿಯ ಎಲ್ಲ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೂ ಆತನ ದಂಧೆಯ ಫಲಾನುಭವಿಯೇ? ರಾಜ್ಯ ಬಿಜೆಪಿ ಸರ್ಕಾರವನ್ನು ಪಿಂಪ್‌ಗಳು ನಿಯಂತ್ರಿಸುತ್ತಿದ್ದಾರೆಯೇ? ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್‌ಗಳಿದ್ದಾರೆ? ಎಂದು ಕಾಂಗ್ರೆಸ್​ ಸರಣಿ ಟ್ವೀಟ್​ಗಳ ಮೂಲಕ ಸರ್ಕಾವನ್ನು ಟೀಕಿಸಿದೆ.

10 ಲಕ್ಷ ತಂದಿದ್ದ ಜಗದೀಶ್ ಫೋನಿನಲ್ಲಿ ಅದೇ ಸಮಯದಲ್ಲಿ ಕೊನೆಯದಾಗಿ 3 ಬಾರಿ ಹೊರಹೋದ ಹಾಗೂ 2 ಬಾರಿ ಒಳಬಂದ ಕರೆ ಸಚಿವರೊಬ್ಬರ ಪಿಎಯದ್ದು ಎಂಬ ಸಂಗತಿ ಬೆಳಕಿಗೆ ಬಂದಿದೆ, ಅದು ಯಾವ ಸಚಿವರ ಪಿಎ? ಜಗದೀಶರನ್ನ ಬಿಟ್ಟು ಕಳಿಸುವಂತೆ ಪೊಲೀಸರಿಗೆ ಕರೆ ಮಾಡಿದ ಸಚಿವ ಯಾರು? ಬಸವರಾಜ ಬೊಮ್ಮಾಯಿ ಅವರೇ, ಈ ರಹಸ್ಯವನ್ನ ನೀವು ಹೇಳುವಿರಾ, ನಾವು ಹೇಳಬೇಕೆ? ಎಂದು ಕೇಳಿದ್ದಾರೆ.

ಸಚಿವರ ಸಿಡಿ ಸಂಕ್ರಾಂತಿ ಸ್ಪೆಷಲ್:ಮೂರು ಸಚಿವರ ಸಿಡಿ 'ಸಂಕ್ರಾಂತಿ ಸ್ಪೆಷಲ್' ಆಗಿ ಹೊರಬರುತ್ತವೆಯಂತೆ, ಈ ಸಿಡಿಗಳ ಹಿಂದೆ ಸ್ಯಾಂಟ್ರೋ ರವಿಯ ಶ್ರಮದಾನವಿರುವಂತಿದೆ. ರಾಜ್ಯ ಬಿಜೆಪಿ, ಆ ಸಿಡಿಗಳು ಯಾವ 3 ಸಚಿವರದ್ದು? ಬಾಂಬೆಗೆ ಹೋದವರದ್ದೇ? ತಡೆಯಾಜ್ಞೆ ತಂದವರದ್ದೇ? ಸಿಡಿ ಮುಂದಿಟ್ಟು ಬ್ಲಾಕ್ಮೇಲ್ ಮಾಡಿ ಮಂತ್ರಿಗಿರಿ ಪಡೆದಿದ್ದಾರೆ ಎಂದಿದ್ದರು ಯತ್ನಾಳ್, ಇವೂ ಅದೇ ಸಿಡಿಗಳಾ? ಕೋಟ್ಯಂತರ ರೂಪಾಯಿಯ ಕಂತೆ ಕಂತೆ ನೋಟುಗಳೊಂದಿಗೆ ಪೋಸ್ ಕೊಡ್ತಿರುವ ಸ್ಯಾಂಟ್ರೋ ರವಿಯ ಮಾಹಿತಿ ಇನ್ನೂ ಐಟಿ, ಇಡಿ ಕಚೇರಿಗಳಿಗೆ ತಲುಪಿಲ್ಲವೇ? ಈ ಅಕ್ರಮ ಹಣದ ಮೂಲ ಹುಡುಕುವುದು ಇಡಿಗೆ ಇಷ್ಟವಿಲ್ಲವೇ ಅಥವಾ ರಾಜ್ಯ ಬಿಜೆಪಿ ಸರ್ಕಾರದ ಬುಡಕ್ಕೆ ಬರುವ ಸಂಗತಿಯನ್ನು ಮುಟ್ಟದಂತೆ ಯಜಮಾನರ ಆಜ್ಞೆಯಾಗಿದೆಯೇ? ಇಡಿ ದಾಳಿ ಯಾವಾಗ ಎಂದು ಕೇಳಿದೆ?

ಪೊಲೀಸರಿಗೇ ಆವಾಜ್:ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಕೈಯ್ಯೊಳಗಿದ್ದಾರೆ ಎನ್ನುತ್ತಾನೆ ಸ್ಯಾಂಟ್ರೋ ರವಿ. ತನಿಖೆಗೆ ಕರೆದ ಪೊಲೀಸರಿಗೇ ಆವಾಜ್ ಹಾಕುತ್ತಾನೆ. ವರ್ಗಾವಣೆ ಮಾಡಿಸುವುದು ನನಗೆ ಲೀಲಾಜಾಲ ಎನ್ನುತ್ತಾನೆ. ಗೃಹಸಚಿವರೇ ಅವನ ಈ ಆತ್ಮವಿಶ್ವಾಸದ ಹಿಂದಿನ ಶಕ್ತಿಯಾಗಿದ್ದಾರಾ? ವೇಶ್ಯಾವಟಿಕೆಯ ಪಿಂಪ್‌ನೊಂದಿಗೆ ಆರಗ ಜ್ಞಾನೇಂದ್ರ ಅವರದ್ದೇನು ನೆಂಟಸ್ತಿಕೆ? ವಿಧಾನಸೌಧ, ಕುಮಾರಕೃಪವೇ ಸ್ಯಾಂಟ್ರೋ ರವಿಯ ಕರ್ಮಭೂಮಿ! ಆಡಳಿತ ಪಕ್ಷದ ಮಂತ್ರಿಗಳು, ಅಧಿಕಾರಿಗಳೆಲ್ಲ ಈತನ ಜೇಬಿನಲ್ಲಿದ್ದಾರೆ.

ಲಂಚ ಮಂಚದ ಸರ್ಕಾರ:ಸಚಿವರೊಂದಿಗೆ ಸಹಕರಿಸಲು ಪತ್ನಿಗೆ ಕಿರುಕುಳ ಕೊಟ್ಟಿದ್ದನಂತೆ, ಯಾರು ಆ ಸಚಿವರು ಬಸವರಾಜ ಬೊಮ್ಮಾಯಿ ಅವರೇ?. ಹಾದಿ ಬೀದಿಯಲ್ಲಿರುವ ಪಿಂಪ್‌ಗಳು ರಾಜ್ಯ ಬಿಜೆಪಿ ಸರ್ಕಾರವನ್ನು ಅಲ್ಲಾಡಿಸುತ್ತಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದು "ಲಂಚ - ಮಂಚದ ಸರ್ಕಾರ" ಎನ್ನುವುದು ಪ್ರತಿ ದಿನವೂ ಸಾಬೀತಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಇರುವುದು ಎರಡೇ ಲಂಚದ ಸದ್ದು, ಮಂಚದ ಸದ್ದು! ಇತ್ತೀಚೆಗೆ ಬೆಳಕಿಗೆ ಬಂದಷ್ಟೇ ವೇಗವಾಗಿ ಮುಚ್ಚಿಹಾಕಿದ್ದ ಸಿಎಂ ಕಾರ್ಯದರ್ಶಿಯ ಹನಿ ಟ್ರಾಪ್ ಪ್ರಕರಣದ ಹಿಂದೆ ಇದೇ ಸ್ಯಾಂಟ್ರೋ ರವಿ ಪಾತ್ರವಿತ್ತೇ? ಕಡತ ನಾಪತ್ತೆಯಲ್ಲೂ ಕೈವಾಡವಿದೆಯೇ?

ತನಿಖೆಯನ್ನು ದುರ್ಬಲಗೊಳಿಸಿದ್ದೇಕೆ?: ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ಪಿಎಸ್​ಐ ಹಗರಣದ ಆರೋಪಿಗಳಿಗೆ ಅರ್ಥಾತ್ ನಿಮ್ಮ ಆಪ್ತರಿಗೆ ಜಾಮೀನು ದೊರಕಿದ್ದು ನಿಮ್ಮ ವೈಫಲ್ಯದಿಂದಲೋ ಅಥವಾ ಸಹಕಾರದಿಂದಲೋ? ಜಾಮೀನು ದೊರಕಿಸಿಕೊಡುವಲ್ಲಿ ಸರ್ಕಾರವೇ ಶ್ರಮ ಹಾಕಿದಂತಿದೆ. ವಿಧಾನಸೌಧದ ಒಳಗಿನ ಕುಳಗಳನ್ನು ವಿಚಾರಣೆಗೆ ಒಳಪಡಿಸಿದೆ ತನಿಖೆಯನ್ನು ದುರ್ಬಲಗೊಳಿಸಿದ್ದೇಕೆ? ಎಂದು ಕೇಳಿದೆ. ಬಸವರಾಜ ಬೊಮ್ಮಾಯಿ ಅವರೇ, ಖಾಲಿ ಕುರ್ಚಿಗಳಿಗೆ ಕಿವಿ ಇಲ್ಲ ಎನ್ನುವುದನ್ನು ಅರಿತಿರುವಿರಾ?! ಖಾಲಿ ಕುರ್ಚಿಗಳ ಮೂಲಕ ಜೆ.ಪಿ. ನಡ್ಡಾ ಅವರಿಗೆ ಬೊಮ್ಮಾಯಿ ಸರ್ಕಾರದ ಸಾಧನೆಯ ದರ್ಶನವಾಗಿರಬಹುದು ಅಲ್ಲವೇ? ಎಂದು ಕಾಂಗ್ರೆಸ್​​​ ಟ್ವೀಟ್​ನಲ್ಲಿ ಪ್ರಶ್ನಿಸಿದೆ. ರಾಜ್ಯದ ಜನತೆಯಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರೇ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಕುರ್ಚಿಗಳು ಮಾತಾಡಿಕೊಳ್ಳುತ್ತಿದ್ದವು! ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

ಇದನ್ನೂಓದಿ:ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್​ಡಿಕೆ

ABOUT THE AUTHOR

...view details