ಬೆಂಗಳೂರು: ಶಕ್ತಿಸೌಧದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ವಿಧಾನಸಭೆ ನಿಗಾವಣೆ ಶಾಖೆಯ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ನಿಗಾವಣೆ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ.
ಶಕ್ತಿಸೌಧದಲ್ಲಿ ಕೊರೊನಾ ಹಾವಳಿ : ನಾಳೆ ವಿಧಾನಸಭೆ ಸಚಿವಾಲಯ ಸ್ಯಾನಿಟೈಸಿಂಗ್..!
ವಿಧಾನಸಭೆ ಸಚಿವಾಲಯವನ್ನು ನಾಳೆ ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದ್ದು, ಸಚಿವಾಲಯದ ಪ್ರತಿ ಶಾಖೆಯಲ್ಲಿ ಒಬ್ಬರು ಮಾತ್ರ ಬಂದು ಶಾಖೆಯ ಒಳಗೆ ಸ್ಯಾನಿಟೈಸ್ ಮಾಡುವಾಗ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ನಾಳೆ ವಿಧಾನಸಭೆ ಸಚಿವಾಲಯ ಸ್ಯಾನಿಟೈಸಿಂಗ್
ಈ ಹಿನ್ನೆಲೆ ವಿಧಾನಸಭೆ ಸಚಿವಾಲಯವನ್ನು ನಾಳೆ ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದ್ದು, ವಿಧಾನಸಭೆ ಸಚಿವಾಲಯದ ಪ್ರತಿ ಶಾಖೆಯಲ್ಲಿ ಒಬ್ಬರು ಮಾತ್ರ ಬಂದು ಶಾಖೆಯ ಒಳಗೆ ಸ್ಯಾನಿಟೈಸ್ ಮಾಡುವಾಗ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಇನ್ನು 55 ವರ್ಷ ದಾಟಿದ ಅಧಿಕಾರಿಗಳು ಹಾಗೂ ನೌಕರರಿಗೆ ನಾಳೆ ಒಂದು ದಿನ ರಜೆಯನ್ನು ಘೋಷಿಸಲಾಗಿದೆ. ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಅಧಿಕಾರಿ ಹಾಗೂ ನೌಕರರು, ಕಚೇರಿಗೆ ಮಧ್ಯಾಹ್ನ 12 ಗಂಟೆಗೆ ತಡವಾಗಿ ಹಾಜರಾಗಬೇಕೆಂದು ವಿಧಾನಸಭೆ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.