ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿರೇನ್ ಖನ್ನಾನನ್ನು ಮತ್ತೆ ಕಸ್ಟಡಿ ವಿಚಾರಣೆಗೆ ಪಡೆದು ಬಹಳಷ್ಟು ರೋಚಕ ಮಾಹಿತಿಗಳನ್ನು ಸಿಸಿಬಿ ಕಲೆಹಾಕಿದೆ.
ವಿರೇನ್ ಖನ್ನಾ ಮೊಬೈಲ್ ಜಪ್ತಿ ಮಾಡಿ ರಿಟ್ರೈವ್ ಮಾಡಿದಾಗ ಹಲವು ಮಾಹಿತಿಗಳು ಬಯಲಾಗಿವೆ. ಹೀಗಾಗಿ ಈತನ ಮೊಬೈಲ್ ಮಾಹಿತಿಯಿಂದ ಬಹಳಷ್ಟು ಮಂದಿಗೆ ಕಂಟಕ ಶುರುವಾಗಿದೆ.
ಆರೋಪಿ ವಿರೇನ್ ಖನ್ನಾ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್ ಮತ್ತು ರಾಜಕೀಯ ಮುಖಂಡರ ಮಕ್ಕಳ ನಂಬರ್ಗಳು ಇವೆ ಎನ್ನಲಾಗ್ತಿದೆ. ಮೊಬೈಲ್ನಲ್ಲಿ ದೊಡ್ಡ ದೊಡ್ಡವರ ಕಾಂಟ್ಯಾಕ್ಟ್ ಲಿಸ್ಟ್ ಹುಡುಕಿದಾಗ ಶಾಸಕರೊಬ್ಬರ ಪುತ್ರ ಸೇರಿ ಹಲವು ಮಂದಿಯ ನಂಬರ್ ಪತ್ತೆಯಾಗಿವೆ. ಪತ್ತೆಯಾದ ಫೋನ್ ನಂಬರ್ಗಳ ಜೊತೆಗಿನ ಸಂಪರ್ಕದ ಮಾಹಿತಿ ಕೆದಕೋಕೆ ಸಿಸಿಬಿ ಮುಂದಾಗಿದೆ. ಮೊಬೈಲ್ ಮಾಹಿತಿಯಾಧಾರದ ಮೇರೆಗೆ ಕೆಲ ರಾಜಕೀಯ ವ್ಯಕ್ತಿಗಳ ಪುತ್ರರಿಗೆ ಶೀಘ್ರವೇ ನೋಟಿಸ್ ನೀಡುವ ಸಾಧ್ಯತೆಯಿದೆ.
ವಿರೇನ್ ಖನ್ನಾ ದೆಹಲಿ ಮೂಲದವನಾಗಿದ್ದು, ಬೃಹತ್ ಮಟ್ಟದ ಪಾರ್ಟಿ ಆಯೋಜಕನಾಗಿದ್ದಾನೆ. ಪಾರ್ಟಿಗೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಈ ಪಾರ್ಟಿಗಳಲ್ಲಿ ಪ್ರತಿಷ್ಠಿತ ನಟ-ನಟಿಯರು, ಉದ್ಯಮಿಗಳು, ಮಾಡೆಲ್, ರಾಜಕಾರಣಿಗಳ ಮಕ್ಕಳು ಭಾಗಿಯಾಗ್ತಿದ್ರು. ಸದ್ಯ ಇವರ ಜಾಲವನ್ನ ಪತ್ತೆ ಹಚ್ಚಲು ಸಿಸಿಬಿ ಮುಂದಾಗಿದೆ.