ಕರ್ನಾಟಕ

karnataka

ETV Bharat / state

ಕೋವಿಡ್ ಟೆಸ್ಟ್​ನಲ್ಲಿ ಸದಾನಂದಗೌಡರಿಗೆ ನೆಗೆಟಿವ್​: ಜಾಗ್ರತೆಯಲ್ಲಿರುವಂತೆ ಜನರಿಗೆ ಕರೆ

ನಾವು ಸಂಪುಟ ಸಭೆ, ಅಧಿಕಾರಿಗಳ ಜೊತೆ ಸಭೆ ನಡೆಸಬೇಕಾಗುತ್ತದೆ. ಪ್ರತಿದಿನ ಹತ್ತಾರು ಜನ ನಮ್ಮನ್ನ ಭೇಟಿಯಾಗುತ್ತಾರೆ. ಜನರ ಮಧ್ಯಯೇ ಇದ್ದು ಕೆಲಸ ಮಾಡಬೇಕಾಗುತ್ತದೆ. ಹಾಗೆ ಮಾಡುವುದು ನಮ್ಮ ಕರ್ತವ್ಯವೂ ಹೌದು.ಹಾಗಾಗಿ ನಾವೆಲ್ಲ ನಿಯಮಿತವಾಗಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದೇವೆ. ಇಂದು ನಡೆಸಿದ ನನ್ನ ಕೊರೊನಾ ಪರೀಕ್ಷೆ ನೆಗೆಟಿವ್‌ ಬಂದಿದೆ ಎನ್ನುವ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

ಕೋವಿಡ್ ಟೆಸ್ಟ್​ನಲ್ಲಿ ಸದಾನಂದಗೌಡರಿಗೆ ನೆಗೆಟಿವ್
ಕೋವಿಡ್ ಟೆಸ್ಟ್​ನಲ್ಲಿ ಸದಾನಂದಗೌಡರಿಗೆ ನೆಗೆಟಿವ್

By

Published : Aug 3, 2020, 5:00 PM IST

ಬೆಂಗಳೂರು: ಸಾರ್ವಜನಿಕ ಜೀವನದಲ್ಲಿರುವ ನಾವು ನಿಯಮಿತವಾಗಿ ಕೊರೊನಾ ತಪಾಸಣೆಗೆ ಒಳಪಡುತ್ತಿದ್ದೇವೆ. ಇಂದು ಕೂಡ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗಟಿವ್ ಬಂದಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ನಾಡಿನ ಜನಪ್ರಿಯ ಮುಖ್ಯಮಂತ್ರಿ, ನಮ್ಮೆಲ್ಲರ ನೆಚ್ಚಿನ ನಾಯಕ ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆರೋಗ್ಯ ಸದೃಢವಾಗಿದೆ. ಅದಕ್ಕೂ ಮಿಗಿಲಾಗಿ ಅವರ ಇಚ್ಛಾಶಕ್ತಿ ದೊಡ್ಡದು. ನಾಲ್ಕೈದು ದಿನಗಳಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎಂದಿನಂತೆ ತಮ್ಮ ಕರ್ತವ್ಯವನ್ನು ಮುಂದುವರಿಸುತ್ತಾರೆ ಎಂದು ಫೆಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್‌ ಚೌಹಾಣ್ ಅವರಿಗೂ ಸೋಂಕು ತಗುಲಿದೆ. ಅವರೆಲ್ಲರೂ ತ್ವರಿತವಾಗಿ ಗುಣಮುಖರಾಗಿ ಎಂದಿನಂತೆ ತಮ್ಮ ಕರ್ತವ್ಯಕ್ಕೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಬಹುಶಃ ಕೊರೊನಾಕ್ಕೆ ನಿರ್ಧಿಷ್ಟ ಔಷಧ ಅಭಿವೃದ್ಧಿ ಆಗುವ ತನಕ ನಾವೆಲ್ಲ ಕೊರೊನಾ ಜೊತೆಜೊತೆಗೇ ಬದುಕುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಎಷ್ಟೇ ಭೌತಿಕ ಅಂತರವನ್ನು ಕಾಪಾಡಿಕೊಳ್ಳುತ್ತೇವೆ ಎಂದರೂ ನಮ್ಮಂತಹ ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳಿಗೆ ಅದು ಕಷ್ಟವಾಗುತ್ತದೆ. ಸಂಪುಟ ಸಭೆ, ಅಧಿಕಾರಿಗಳ ಜೊತೆ ಸಭೆ ನಡೆಸಬೇಕಾಗುತ್ತದೆ. ಪ್ರತಿದಿನ ಹತ್ತಾರು ಜನ ನಮ್ಮನ್ನ ಭೇಟಿಯಾಗುತ್ತಾರೆ. ಜನರ ಮಧ್ಯಯೇ ಇದ್ದು ಕೆಲಸ ಮಾಡಬೇಕಾಗುತ್ತದೆ. ಹಾಗೆ ಮಾಡುವುದು ನಮ್ಮ ಕರ್ತವ್ಯವೂ ಹೌದು.ಹಾಗಾಗಿ ನಾವೆಲ್ಲ ನಿಯಮಿತವಾಗಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದೇವೆ. ಇಂದು ನಡೆಸಿದ ನನ್ನ ಕೊರೊನಾ ಪರೀಕ್ಷೆ ನೆಗೆಟಿವ್‌ ಬಂದಿದೆ ಎನ್ನುವ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಲ್ಲಿ ಹೋಗುವುದು ಅನಿವಾರ್ಯವಾದಾಗ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಜನರ ಮಧ್ಯೆ ಸುರಕ್ಷಿತ ಭೌತಿಕ ಅಂತರ ಇರಲಿ. ಮುಖಗವಸು ಧರಿಸಿ. ಸೋಂಕು ನಿರೋಧಕ ದ್ರಾವಣ ಬಳಸಿ. ದೊಡ್ಡ ಸಭೆ-ಸಮಾರಂಭಗಳನ್ನು ಏರ್ಪಡಿಸಬೇಡಿ. ದೇಶದ ಆರೋಗ್ಯ ಶುಶ್ರೂಷಾ ವ್ಯವಸ್ಥೆ ಮೇಲೆ ಒತ್ತಡ ಹಾಕುವುದು ಬೇಡ. ನಮ್ಮ ಭಾರತೀಯ ಆಹಾರ ಮತ್ತು ಜೀವನ ಪದ್ಧತಿಯಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅನೇಕ ಪದಾರ್ಥಗಳು, ವಿಧಾನಗಳು ಇವೆ. ಅವನ್ನೆಲ್ಲ ಅಳವಡಿಸಿಕೊಳ್ಳಿ. ಒಟ್ಟಿನಲ್ಲಿ ಜಾಗ್ರತೆಯಾಗಿರಿ ಎಂದು ಕೇಂದ್ರ ಸಚಿವರು ಜನರಿಗೆ ಕರೆ ನೀಡಿದ್ದಾರೆ.

ABOUT THE AUTHOR

...view details