ಬೆಂಗಳೂರು: ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಾಸಕ ಹ್ಯಾರೀಸ್ ಬೆಂಬಲಿಗನೆಂದು ಹೇಳಿಕೊಂಡು ಪಲ್ಲು ಪ್ರಕಾಶ್ ಎಂಬಾತ, ಕಣ್ಣನ್ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನಕ್ಕೆ ಕಾಲಿಟ್ಟರೆ ಕಾಲು ಕತ್ತರಿಸುತ್ತೇನೆ... ಶಾಸಕನ ಹೆಸರೇಳಿಕೊಂಡು ರೌಡಿಸಂ- ವಿಡಿಯೋ - Rowdism, in bangalore by using MLA name
ಶಾಸಕರೊಬ್ಬರ ಹೆಸರನ್ನು ಹೇಳಿಕೊಂಡು ಏರಿಯಾದಲ್ಲಿ ದಮ್ಕಿ ಹಾಕಿ ರೌಡಿಸಂ ಮಾಡುತ್ತಿದ್ದ ಪುಂಡನೋರ್ವನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಳೆದ ಒಂದು ವರ್ಷದಿಂದ ದೇಗುಲದ ಹೂವಿನ ಅಲಂಕಾರವನ್ನ ಮಾಡುತ್ತಿದ್ದ ಕಣ್ಣನ್ಗೆ, ನೀನು ನಮ್ಮ ಏರಿಯಾ ದೇಗುಲಕ್ಕೆ ಕಾಲಿಡಬಾರದು. ನಿನ್ನ ಬ್ಯುಸಿನೆಸ್ನ್ನೆಲ್ಲ ಖಾಲಿ ಮಾಡಿಕೊಂಡು ಹೋಗು, ಇಲ್ಲದಿದ್ದರೆ ಕಾಲು ಕತ್ತರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕಣ್ಣನ್ ಅವರ ಮೇಲೆ ಪಲ್ಲು ಪ್ರಕಾಶ್ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಹಾಗೆ ಪಲ್ಲು ಪ್ರಕಾಶ್ ಶಾಸಕ ಹ್ಯಾರೀಸ್ ಜೊತೆಯಲ್ಲಿನ ಫೋಟೊವೊಂದನ್ನು ಇಟ್ಟುಕೊಂಡು ತಾನು ಬೆಂಬಲಿಗ ಎಂದು ಬಿಂಬಿಸುತ್ತಿರುವ ಕುರಿತು ತನಿಖೆ ನಡೆಯುತ್ತಿದೆ.