ಕರ್ನಾಟಕ

karnataka

By

Published : Aug 29, 2019, 5:38 AM IST

Updated : Aug 29, 2019, 7:17 AM IST

ETV Bharat / state

ಉಚಿತ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ ಚಾಲನೆ

ಬಿಬಿಎಂಪಿ ವತಿಯಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ಉಚಿತ ರೋಟಾ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಿದ್ದಯ್ಯ ರೆಫರಲ್ ಆಸ್ಪತ್ರೆ ಆವರಣದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಮೇಯರ್ ಗಂಗಾಂಬಿಕೆ ಚಾಲನೆ ನೀಡಿದರು.

ರೋಟಾ ವೈರಸ್ ಲಸಿಕಾ ಕಾರ್ಯಕ್ರಮ

ಬೆಂಗಳೂರು: ಬಿಬಿಎಂಪಿ ವತಿಯಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ಉಚಿತ ರೋಟಾ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮೇಯರ್ ಗಂಗಾಂಬಿಕೆ ಉದ್ಘಾಟಿಸಿದರು.

ನಗರದ ಸಿದ್ದಯ್ಯ ರೆಫರಲ್ ಆಸ್ಪತ್ರೆ ಆವರಣದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಮೇಯರ್ ಚಾಲನೆ ನೀಡಿದರು. ಈ ವೇಳೆ ಉಪ ಮೇಯರ್ ಬಿ.ಭದ್ರೇಗೌಡ, ಆಡಳಿತ ಪಕ್ಷದ ನಾಯಕರು, ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿಗಳು ಹಾಗೂ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.‌

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ಗಂಗಾಂಬಿಕೆ, ಮಕ್ಕಳಲ್ಲಿ ರೋಟಾ ವೈರಸ್ ಸೋಂಕು (ಅತಿಸಾರ,ಭೇದಿ) ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಾಗೂ ಪಾಲಿಕೆ ವತಿಯಿಂದ ಉಚಿತವಾಗಿ ರೋಟಾ ವೈರಸ್ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ರೋಟಾ ವೈರಸ್ ಲಸಿಕಾ ಕಾರ್ಯಕ್ರಮ

ನಂತರ ಲಸಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪಮೇಯರ್, ಸರ್ಕಾರ ಮತ್ತು ಬಿಬಿಎಂಪಿ ವತಿಯಿಂದ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಪಡಿಸಿದೆ. ಜನರು ಅದರ ಸದುಪಯೋಗವನ್ನು ಪಡೆದು ಕೊಳ್ಳಬೇಕು. ಅಲ್ಲದೆ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆಯೂ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ. ಅದರಂತೆ ಮಕ್ಕಳಿಗೆ ಪಾಲಿಕೆಯಿಂದ ಉಚಿತವಾಗಿ ರೋಟಾ ವೈರೆಸ್ ಲಸಿಕೆ‌ ಹಾಕಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಒಂದು ಸಲ ಲಸಿಕೆ ಹಾಕಿಸಬೇಕಾದರೆ 2 ಸಾವಿರ ರೂ.‌ ವ್ಯಯಿಸಬೇಕು. ಆದರೆ, ಪಾಲಿಕೆಯಿಂದ ಉಚಿತವಾಗಿ 3 ಬಾರಿ ಲಸಿಕೆ ಹಾಕುತ್ತಿದ್ದೇವೆ. ಈ ಬಗ್ಗೆ ಆಶಾಕಾರ್ಯಕರ್ತೆಯರು, ಸಹಾಯಕ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಮಕ್ಕಳ ಪೋಷಕರಿಗೆ ಮಾಹಿತಿ ನೀಡಿ ಲಸಿಕೆ ಹಾಕಿಸುವಂತೆ ಸೂಚಿಸಿದರು.

ಪಾಲಿಕೆಯ 198 ವಾರ್ಡ್ ಗಳಲ್ಲಿ ಬರುವ ನಗರ ಪಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 98 ಲಕ್ಷ ಜನಸಂಖ್ಯೆ ಇದ್ದು, ಈ ಜನಸಂಖ್ಯೆಗೆ ಪ್ರತಿ ವರ್ಷ ಸುಮಾರು 1.50 ಲಕ್ಷ ಮಕ್ಕಳು ಜನನಿಸುತ್ತಿದ್ದಾರೆ. ಈ ಮಕ್ಕಳ ಆರೋಗ್ಯದ ಕಡೆ ಗಮನಹರಿಸುವುದು ಸರ್ಕಾರದ ಮತ್ತು ಪಾಲಿಕೆಯ ಆದ್ಯ ಕರ್ತವ್ಯವಾಗಿದೆ. ದೇಶದಲ್ಲಿ ಪ್ರತಿ ವರ್ಷವು ಮಾರಕ ರೋಗಗಳಿಂದ ಲಕ್ಷಾಂತರ ಮಕ್ಕಳು ಮರಣ ಹೊಂದುತ್ತಿದ್ದಾರೆ. ಈ ಸಂಬಂಧ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರವು ಅನೇಕ ಲಸಿಕಾ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮಕ್ಕಳಿಗೆ ಲಸಿಕೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

Last Updated : Aug 29, 2019, 7:17 AM IST

ABOUT THE AUTHOR

...view details