ಬೆಂಗಳೂರು: ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಣೆಗೊರವನಹಳ್ಳಿ ನೇತಾಜಿ ಪಾರ್ಕ್ ಬಳಿ ಕಾಮಾಕ್ಷಿ ಪೊಲೀಸ್ ಠಾಣೆಯ ರೌಡಿ ಚೇತನ ತುರೆ ಎಂಬಾತನು ತನ್ನ ಐದಾರು ಸಹಚರರೊಂದಿಗೆ ಲಾಂಗ್ ಮತ್ತು ಇನ್ನಿತರ ಮಾರಕಾಸ್ತ್ರಗಳನ್ನ ಇಟ್ಟುಕೊಂಡು ದರೋಡೆ ಮಾಡಲು ಸಂಚು ರೂಪಿಸಿದ್ದ. ಹೀಗಾಗಿ ಕೇಂದ್ರ ವಿಭಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ದರೋಡೆಗೆ ಸ್ಕೆಚ್ ಹಾಕಿದ್ದ ರೌಡಿಶೀಟರ್ಗಳ ಬಂಧನ - ರಾಬರ್ಸ್ ಅರೆಸ್ಟ್
ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ರೌಡಿಶೀಟರ್ ಸೇರಿದಂತೆ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚೇತನ ಕುಮಾರ್ ಅಲಿಯಾಸ್ ತುರೆ ಬಿನ್ ಉಮಾಶಂಕರ್, ಎಂ. ರಾಹುಲ್ ಅಲಿಯಾಸ್ ಮಂಜುನಾಥ ಬಂಧಿತ ಆರೋಪಿಗಳು.
ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ
ಇನ್ನು ಬಂಧಿತ ಆರೋಪಿ ಚೇತನಕುಮಾರ್ ಅಲಿಯಾಸ್ ತುರೆ ವಿರುದ್ಧ 1 ಕೊಲೆ, 4 ಕೊಲೆ ಯತ್ನ, 1 ದರೋಡೆ ಪ್ರಕರಣ ಸೇರಿದಂತೆ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಈ ಪ್ರಕರಣದಲ್ಲಿ ಸತೀಶ, ಭಾರ್ಗವ, ಕಿಶೋರ ಎಂಬುವರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಂಧಿತರಿಂದ ಒಂದು ಬ್ಯಾಟ್ ಹಾಗೂ ಲಾಂಗ್ ವಶಕ್ಕೆ ಪಡೆಯಲಾಗಿದೆ.