ಆನೇಕಲ್(ಬೆಂಗಳೂರು): ಅತ್ತಿಬೆಲೆ ರಸ್ತೆಯಲ್ಲಿ ಮಾಯಸಂದ್ರದೆಡೆಗೆ ನಡೆದು ಹೋಗುತ್ತಿದ್ದ ಮೂವರು ಕಾರ್ಮಿಕರಿಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಐಸರ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಚಂದನ್ ದಾಸ್ ಮಾಯಸಂದ್ರದ ಪ್ಲಿಪ್ಕಾರ್ಟ್ನಲ್ಲಿ 7 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ. ಆಸಿಮ್ ದೆಯರಿ ಮತ್ತು ಕರಣ್ ಬಿಸುಮತರಿ ಮಾಯಸಂದ್ರದ ಡಿಹೆಚ್ಎಲ್ ನಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದರು. ಮೂವರು ಅಸ್ಸೋಂ ಮೂಲದವರಾಗಿದ್ದು, ಚಂದ್ರಪ್ಪ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು.