ಬೆಂಗಳೂರು:ಬಿಬಿಎಂಪಿ ಮಹಿಳಾ ಪೌರ ಕಾರ್ಮಿಕ ಮಹಿಳೆಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಪೌರ ಕಾರ್ಮಿಕ ಮಹಿಳೆಗೆ ಕ್ಯಾಂಟರ್ ವಾಹನ ಡಿಕ್ಕಿ: ಸ್ಥಳದಲ್ಲೆ ಸಾವು - undefined
ಎಂದಿನಂತೆ ಬೆಳಗ್ಗೆ ತಮ್ಮ ಕಾಯಕದಲ್ಲಿ ನಿರತವಾಗಿದ್ದ ಬಿಬಿಎಂಪಿ ಪೌರ ಕಾರ್ಮಿಕ ಮಹಿಳೆಗೆ ಹಿಂದಿನಿಂದ ಬಂದ ಯಮರೂಪಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ಧಾರೆ.
ಕಮಲಮ್ಮ,ಮೃತ ಬಿಬಿಎಂಪಿ ಪೌರ ಕಾರ್ಮಿಕ ಮಹಿಳೆ
ಕಮಲಮ್ಮ (47) ಮೃತ ಮಹಿಳೆ. ಜೆಪಿ ನಗರದ ದಾಲ್ಮಿಯಾ ಸಿಗ್ನಲ್ ಬಳಿ ಎಂದಿನಂತೆ ಕಮಲಮ್ಮ ರಸ್ತೆ ಗುಡಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ವಾಹನ ರಸ್ತೆ ಗುಡಿಸುತ್ತಿದ್ದ ಕಮಲಮ್ಮನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಮಲಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಬಳಿಕ ಕ್ಯಾಂಟರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ಧಾರೆ. ತನಿಖೆ ಕೈಗೊಂಡಿರುವ ಪೊಲೀಸರು ಚಾಲಕನ ಪತ್ತೆಗೆ ಶೋಧ ಮುಂದುವರೆಸಿದ್ದಾರೆ.