ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ತಡೆಯಲು ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ಖರೀದಿಸಲು 5 ಕೋಟಿ ರೂ ಅನುದಾನ ಹಣವನ್ನು ಕಂದಾಯ ಇಲಾಖೆ ಬಿಡುಗಡೆ ಮಾಡಿದೆ.
ಪೊಲೀಸ್ ಇಲಾಖೆ ಸಿಬ್ಬಂದಿ ರಕ್ಷಣೆಗೆ 5 ಕೋಟಿ ರೂ ಅನುದಾನ ಬಿಡುಗಡೆ - ಪೊಲೀಸ್ ಸಿಬ್ಬಂದಿಯ ರಕ್ಷಣೆಗೆ 5 ಕೋಟಿ ಅನುಧಾನ
ಕೋವಿಡ್-19 ತಡೆಯಲು ಲಾಕ್ಡೌನ್ ಹೇರಿದ ನಂತರ ಪ್ರತಿನಿತ್ಯ ರಸ್ತೆಗಳಲ್ಲಿ ಬಂದೋಬಸ್ತ್‌ನಲ್ಲಿ ಪೊಲೀಸರು ತೊಡಗಿದ್ದು ಅವರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸೋ ಸಲುವಾಗಿ, ರಕ್ಷಣಾ ಸಾಮಾಗ್ರಿ ಖರೀದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಹಣ ಬಿಡುಗಡೆಗೆ ಮನವಿ ಮಾಡಿದ್ದರು.
ಕೋವಿಡ್-19 ತಡೆಯಲು ಲಾಕ್ಡೌನ್ ಹೇರಿದ ನಂತರ ಪ್ರತಿನಿತ್ಯ ರಸ್ತೆಗಳಲ್ಲಿ ಭದ್ರತೆಯಲ್ಲಿ ಪೊಲೀಸರು ತೊಡಗಿದ್ದು ಅವರಿಗೆ ಸೋಂಕು ತಗುಲದಂತೆ ಎಚ್ಚರವಹಿಸೋ ಸಲುವಾಗಿ ರಕ್ಷಣಾ ಸಾಮಾಗ್ರಿ ಖರೀದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಹಣ ಬಿಡುಗಡೆಗೆ ಮನವಿ ಮಾಡಿದ್ದರು.
ಹೀಗಾಗಿ, ಎಸ್ಡಿಆರ್ಎಫ್ ನಿಧಿಯಲ್ಲಿ 5 ಕೋಟಿ ಹಣ ರೂ ಬಿಡುಗಡೆ ಮಾಡಿ ಪೊಲೀಸರ ಆರೋಗ್ಯ ಮತ್ತು ರಕ್ಷಣೆ ಸಲುವಾಗಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಪ್ರೊಟೆಕ್ಟ್ ಸೂಟ್ ಖರೀದಿಲಾಗುತ್ತದೆ. ಹಾಗೆಯೇ ಅನುದಾನ ಬಳಕೆಯಲ್ಲಿ ಲೋಪದೋಷವಾಗದಂತೆ ಮೂರು ಷರತ್ತುಗಳನ್ನು ವಿಧಿಸಿದೆ.