ಕರ್ನಾಟಕ

karnataka

ETV Bharat / state

ಕಲ್ಯಾಣ ಮಂಟಪಗಳಲ್ಲಿ ಕೋವಿಡ್‌ ನಿಯಮ ಪಾಲಿಸಿ: ಸಚಿವ ಸುರೇಶ್ ಕುಮಾರ್

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್ ಸೆಂಟರ್ ಅನ್ನು ಸಚಿವ ಸುರೇಶ್ ಕುಮಾರ್ ಲೋಕಾರ್ಪಣೆ ಮಾಡಿದರು.

request-from-the-minister-of-education-to-follow-rules-in-welfare-pavilions
ಕಲ್ಯಾಣ ಮಂಟಪಗಳಲ್ಲಿ ನಿಯಮಗಳನ್ನು ಪಾಲಿಸುವಂತೆ ಶಿಕ್ಷಣ ಸಚಿವರಿಂದ ಕೋರಿಕೆ

By

Published : Apr 18, 2021, 4:14 PM IST

ಬೆಂಗಳೂರು: ಬೊಮ್ಮನಹಳ್ಳಿ ಮತ್ತು ಆನೇಕಲ್ ವಲಯದಲ್ಲಿರುವ ಕಲ್ಯಾಣ ಮಂಟಪಗಳ ಮಾಲೀಕರನ್ನು ಕರೆದು ಕೊರೊನಾ ನಿಯಂತ್ರಣ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್​ ಮನವಿ ಮಾಡಿದರು.

ಈ ವೇಳೆ, ಸುಮಾರು 40ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳ ಮಾಲೀಕರು ಬಂದಿದ್ದರು. ತದನಂತರ ಈ ಭಾಗದ ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕ ಮಂಡಳಿಗಳ ಜೊತೆಗೂ ಸಭೆ ನಡೆಸಿ ಸಚಿವರು, ಸರ್ಕಾರ ನಿಗದಿಗೊಳಿಸಿರುವ ಬೆಡ್​ಗಳನ್ನು ಕಡ್ಡಾಯವಾಗಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ನೀಡಬೇಕೆಂದು ಸೂಚನೆ ನೀಡಿದರು.

ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಸಭೆ

ಈ ಸಭೆಯ ನಂತರ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಬೊಮ್ಮನಹಳ್ಳಿ ವಲಯಕ್ಕೆ ಉಸ್ತುವಾರಿ ಅಧಿಕಾರಿಯಾಗಿ ನೇಮಕಗೊಂಡಿರುವ ರಾಜೇಂದ್ರಕುಮಾರ್ ಕಠಾರಿಯಾ, ವಲಯದ ಜಂಟಿ ಆಯುಕ್ತ ರಾಮಕೃಷ್ಣ, ವಿಭಾಗದ ಡಿಸಿಪಿ ಶ್ರೀನಾಥ ಜೋಶಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸೀಟಿ ಹೊಡೆದು ಕೊರೊನಾ ಜಾಗೃತಿ ಮೂಡಿಸಿದ ಡಿಸಿ.. ಇಂದಿನಿಂದ ಸುರಕ್ಷಾ ಪಡೆಯ 65 ಮಂದಿ ಕಾರ್ಯಾಚರಣೆ

For All Latest Updates

TAGGED:

ABOUT THE AUTHOR

...view details