ಕರ್ನಾಟಕ

karnataka

ETV Bharat / state

ಬೆಂಗಳೂರು : ಒಮಿಕ್ರಾನ್ ಸೋಂಕಿತನ ಸಂಪರ್ಕಿತರ ಎಲ್ಲರ ರಿಪೋರ್ಟ್ ನೆಗೆಟಿವ್

5 ಪ್ರಾಥಮಿಕ ಸಂಪರ್ಕಿತರು ಮತ್ತು 15 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಯಾರಿಗೂ ರೋಗಲಕ್ಷಣ ಕಂಡು ಬಂದಿಲ್ಲ. ಎಲ್ಲರ ಸ್ಯಾಂಪಲ್ಸ್ ಪಡೆದು ಕೋವಿಡ್ ಟೆಸ್ಟ್ ಮಾಡಿದಾಗ ನೆಗಟಿವ್ ರಿಪೋರ್ಟ್ ಬಂದಿವೆ.‌.

ಕೋವಿಡ್ ಟೆಸ್ಟ್
ಕೋವಿಡ್ ಟೆಸ್ಟ್

By

Published : Dec 12, 2021, 10:39 PM IST

ಬೆಂಗಳೂರು :ರಾಜ್ಯದ ರಾಜಧಾನಿಯಲ್ಲಿ ಒಮಿಕ್ರಾನ್ ಮೂರನೇ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಅವ್ರ ಸಂಪರ್ಕಿತರ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಎಲ್ಲರ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಎಲ್ಲರ ವರದಿ ನೆಗಟಿವ್ ಬಂದಿವೆ.‌ ಅಂದಹಾಗೇ, 34 ವರ್ಷದ ಸೋಂಕಿತ ವ್ಯಕ್ತಿಗೆ ಕೋವಿಶೀಲ್ಡ್‌ನ ಎರಡು ಡೋಸ್ ವ್ಯಾಕ್ಸಿನೇಷನ್ ಆಗಿತ್ತು.

ಡಿಸೆಂಬರ್ 1ರಂದು ದಕ್ಷಿಣ ಆಫ್ರಿಕಾದಿಂದ RT-PCR Negative ವರದಿಯೊಂದಿಗೆ ಪ್ರಯಾಣಿಸಿದ್ದರು. ಅದೇ ದಿನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ನೆಗೆಟಿವ್ ವರದಿ ನೀಡಲಾಯಿತು.

ಮನೆಗೆ ತಲುಪಿದ ಮರುದಿನ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸ್ವಯಂಪ್ರೇರಿತರಾಗಿ ಲ್ಯಾಬ್​​ಗೆ ಹೋಗಿ ಸ್ವ್ಯಾಬ್ ಟೆಸ್ಟ್ ನೀಡಿ ಬಂದಿದ್ದರು. ಈ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.‌ ಹೈರಿಸ್ಕ್ ದೇಶದಿಂದ ಬಂದ‌ ಹಿನ್ನೆಲೆ ಸ್ಯಾಂಪಲ್ಸ್ ಅನ್ನ ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು.

ಇತ್ತ ಅವರನ್ನ ಡಿಸೆಂಬರ್ 3ರಿಂದ ಈವರೆಗೆ ಬೋರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ, ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾವುದೇ ರೋಗಲಕ್ಷಣಗಳು ಇಲ್ಲ ಹಾಗೂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಟ್ಯಾಕ್ಟ್ ಟ್ರೇಸಿಂಗ್:5 ಪ್ರಾಥಮಿಕ ಸಂಪರ್ಕಿತರು ಮತ್ತು 15 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ಯಾರಿಗೂ ರೋಗಲಕ್ಷಣ ಕಂಡು ಬಂದಿಲ್ಲ. ಎಲ್ಲರ ಸ್ಯಾಂಪಲ್ಸ್ ಪಡೆದು ಕೋವಿಡ್ ಟೆಸ್ಟ್ ಮಾಡಿದಾಗ ನೆಗಟಿವ್ ರಿಪೋರ್ಟ್ ಬಂದಿವೆ.‌

ಸದ್ಯ ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಎರಡನೇ ಬಾರಿ ಟೆಸ್ಟ್ ಅನ್ನ 8ನೇ ದಿನದಂದು ಸಂಗ್ರಹಿಸಲಾಗಿದೆ ಮತ್ತು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details