ಕರ್ನಾಟಕ

karnataka

ಯಲಹಂಕದಲ್ಲಿ ಕೊರೊನಾ ವೈರಸ್​​​ ಸೋಂಕಿತರ ಪುನರ್ವಸತಿ ಕೇಂದ್ರ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ಇದರಿಂದ ಜನರ ಭಯವೂ ಹೆಚ್ಚಾಗಿದೆ.ಈ ಹಿನ್ನೆಲೆ ವೈರಸ್​ ಸೋಂಕಿತರಿಗಾಗಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ.

By

Published : Mar 11, 2020, 3:13 PM IST

Published : Mar 11, 2020, 3:13 PM IST

meeting
ಸಭೆ

ಬೆಂಗಳೂರು:ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ. ಇನ್ನು ಸೋಂಕಿತರಿಗೆ ಯಲಹಂಕ ಬಳಿಯ ಬಿಎಸ್ಎಫ್ ಕ್ಯಾಂಪಸ್​​​​ನಲ್ಲಿ 300 ಹಾಸಿಗೆಯುಳ್ಳ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ.

ಯಲಹಂಕ ಬಳಿ ಇರುವ ಬಿಎಸ್​​ಎಫ್ ಕ್ಯಾಂಪಸ್​​ನ ಒಂದೇ ಕಟ್ಟಡದಲ್ಲಿ 6 ಜವಾನ್ ಬ್ಯಾರೇಜ್ ನಿರ್ಮಿಸಲಾಗಿದ್ದು, ಪುನರ್ವಸತಿ ಕೇಂದ್ರದಲ್ಲಿನ ಒಂದು ಬ್ಯಾರೇಜ್​​ನಲ್ಲಿ 4 ಶೌಚಾಲಯ, ಅಡುಗೆ ಕೋಣೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.

ಸಭೆ ನಡೆಸುತ್ತಿರುವ ಅಧಿಕಾರಿಗಳು

ಸಿಎಂ ಜಂಟಿ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಜಂಟಿ ಆಯುಕ್ತ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆಯಲ್ಲಿ ಪುನರ್ವಸತಿ ಕೇಂದ್ರದ ನಿರ್ವಹಣೆ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೆಂ. ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಯಲಹಂಕ ತಹಶಿಲ್ದಾರ್ ಎನ್.ರಘುಮೂರ್ತಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರತಿ ವಾರ್ಡ್​ಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಇನ್ನು ಪುನರ್ವಸತಿ ಕೇಂದ್ರಕ್ಕೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನು ರಾಜ್ಯ ಸರ್ಕಾರವೇ ಕಲ್ಪಿಸಲಿದ್ದು, ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಕೊರೊನಾ ಪೀಡಿತರ ಆರೈಕೆ ಮಾಡುವ 500 ಜನ ಸಿಬ್ಬಂದಿಗೆ ರೋಗ ನಿರೋಧಕ ಜಾಕೆಟ್ ನೀಡಲಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details