ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 550 ಕೆಜಿ ರಕ್ತಚಂದನ​​​​​ ವಶಕ್ಕೆ

ಬೆಂಗಳೂರು ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಇದೀಗ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಚಂದ್ರ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ರೆಡ್ ಸ್ಯಾಂಡಲ್ ಸ್ಮಗ್ಲರ್ಸ್​

By

Published : Aug 27, 2019, 4:34 PM IST


ಬೆಂಗಳೂರು:ನಗರದಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಇದೀಗ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಚಂದ್ರ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಯಾನ್ ಶರೀಫ್ ಹಾಗೂ ಸೈಯಾದ್ ಜುವೇರ್ ಬಂಧಿತ ಆರೋಪಿಗಳು. ಬೆಂಗಳೂರಿನಿಂದ ಹೊರ ರಾಜ್ಯಕ್ಕೆ ರೆಡ್ ಸ್ಯಾಂಡಲ್ ಸಾಗಣೆ ಮಾಡಲು ಯತ್ನಿಸುತ್ತಿದ್ದ ಮಾಹಿತಿಯನ್ನು ಬಾತ್ಮೀದಾರರು ಚಂದ್ರ ಲೇಔಟ್ ಪೊಲೀಸರಿಗೆ ರವಾನೆ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಂದ್ರ ಲೇಔಟ್ ಪೊಲೀಸರು ಕೋಟಿ ಕೋಟಿ ಮೌಲ್ಯದ 550 ಕೆಜಿ ಅಕ್ರಮ ರಕ್ತಚಂದನವನ್ನು ರೆಡ್ ಹ್ಯಾಂಡ್ ಆಗಿ ಸೀಜ್​​ ಮಾಡಿದ್ದಾರೆ.

ಪಾದರಾಯನಪುರದ ವಿನಾಯಕ ನಗರದಲ್ಲಿ ಅಕ್ರಮವಾಗಿ ರಕ್ತಚಂದನವನ್ನು ಶೇಖರಿಸಿಟ್ಟು ನಂತರ ಹೊರ ರಾಜ್ಯಕ್ಕೆ ರವಾನೆ ಮಾಡುತ್ತಿರುವ ವಿಚಾರ ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸದ್ಯ ಚಂದ್ರ ಲೇಔಟ್ ಪೊಲೀಸರು ತನಿಖೆ ಚುರುಕುಗೊಳಿಸಿ ಇನ್ನಷ್ಟು ಮಾಹಿತಿ ಕಲೆಹಾಕ್ತಿದ್ದಾರೆ.

ABOUT THE AUTHOR

...view details