ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ಅಂತಿಮ ತನಿಖಾ ವರದಿ ಸಿದ್ದವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದೇ ವೇಳೆ ಹೈಕೋರ್ಟ್ ತನಿಖಾ ವರದಿಯನ್ನು ಜುಲೈ 14ರವರೆಗೆ ಸಲ್ಲಿಸದಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪೀಠಕ್ಕೆ ಮಾಹಿತಿ ನೀಡಿ, ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಅಂತಿಮ ತನಿಖಾ ವರದಿಯೂ ಸಿದ್ದವಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಜುಲೈ 14ರವರೆಗೆ ತನಿಖಾ ವರದಿಯನ್ನು ಸಲ್ಲಿಸದಂತೆ ಎಸ್ಐಟಿ ಪೊಲೀಸರಿಗೆ ನಿರ್ದೇಶಿಸಿತು. ಯುವತಿ ಸಲ್ಲಿಸಿರುವ ದಾಖಲೆಗಳ ಇಂಗ್ಲಿಷ್ ಅನುವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸದ ವಿಚಾರ ಪರಿಗಣಿಸಿ ಪೀಠ ಈ ನಿರ್ದೇಶನ ನೀಡಿತಲ್ಲದೇ, ಯುವತಿ ಪರ ವಕೀಲರಿಗೆ ಇಂಗ್ಲಿಷ್ ಅನುವಾದದ ಪ್ರತಿಗಳನ್ನು ಸಲ್ಲಿಸುವಂತೆ ಸೂಚಿಸಿತು.