ಬೆಂಗಳೂರು: ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ವಿವಿ ಪುರಂ ನಿವಾಸಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.
ದಿ.ಅನಂತಕುಮಾರ್ ಮನೆಗೆ ರಾಷ್ಟ್ಪಪತಿ ರಾಮನಾಥ್ ಕೋವಿಂದ್ ಭೇಟಿ - ದಿವಂಗತ ಅನಂತಕುಮಾರ್
ಬೆಂಗಳೂರಿಗೆ ಬಂದಾಗ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಅನಂತ್ ಕುಮಾರ್ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗದ ಕಾರಣ, ಕರೆ ಮಾಡಿ ಸಾಂತ್ವನ ಹೇಳಿದ್ದರು. ಬೆಂಗಳೂರಿಗೆ ಬಂದಾಗ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ, ಕೇವಲ ಸಾಂತ್ವನ ಹೇಳುವ ಕಾರಣಕ್ಕೆ ಬಂದಿದ್ದರು. 1998ರಿಂದ ಅನಂತ್ಕುಮಾರ್ ಹಾಗೂ ರಾಮನಾಥ್ ಕೋವಿಂದ್ ಅವರು ಸ್ನೇಹಮಯಿ ಆಗಿದ್ದರು. ಇಬ್ಬರ ನಡುವಿನ ಒಡನಾಟ ಚೆನ್ನಾಗಿತ್ತು ಎಂದು ಅನಂತ್ ಕುಮಾರ್ ರವರ ನೆನಪು ಮೆಲುಕು ಹಾಕಿದರು.