ಕರ್ನಾಟಕ

karnataka

By

Published : Feb 27, 2021, 7:57 PM IST

ETV Bharat / state

ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಾರೋಪ : ರಾಜ್ಯದಲ್ಲಿ ₹150 ಕೋಟಿ ಸಂಗ್ರಹ

ಅಯೋಧ್ಯೆಯ ರಾಮಜನ್ಮ ಜಾಗ ಸದ್ಯ ವಿವಾದಿತ ಭೂಮಿಯಲ್ಲ ಎಂದು‌ ಕೋರ್ಟ್ ಹೇಳಿದೆ. ಅಲ್ಲಿ ಭವ್ಯ‌ ರಾಮಮಂದಿರ ನಿರ್ಮಾಣಕ್ಕೆ ತೀರ್ಪು ನೀಡಿದೆ. ಯಾರೋ ಕಾರ್ಪೊರೇಟ್​​ಗಳು ನಾವು ಮಂದಿರ ನಿರ್ಮಾಣ ಮಾಡುತ್ತೇವೆ ಎಂದು‌ ಮುಂದೆ ಬಂದಿದ್ದರು..

ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಾರೋಪ
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಾರೋಪ

ಬೆಂಗಳೂರು :ರಾಷ್ಟ್ರಧರ್ಮ ಸಂಸ್ಥೆಯಿಂದ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನ ಹಿನ್ನೆಲೆ ಇಂದು ನಿಧಿ ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು.

ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಾರೋಪ

ಲಾಲ್ ಬಾಗ್ ವೆಸ್ಟ್ ಗೇಟ್​ನ ಸಮೀಪದ ಅನಂತ ವನದಲ್ಲಿ 2 ಲಕ್ಷ ಮೌಲ್ಯದ 1 ಹಾಗೂ 5 ನಾಣ್ಯವಿರುವ ಒಟ್ಟು 60 ಸಾವಿರ ನಾಣ್ಯಗಳಿಂದ ರಾಮಮಂದಿರ ಹಾಗೂ ಶ್ರೀರಾಮನ ಕಲಾಕೃತಿ ಸ್ಥಳಕ್ಕೆ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು.

ಬಳಿಕ ಮಾತನಾಡಿದ ಶ್ರೀಗಳು, ಅಯೋಧ್ಯೆಯ ರಾಮಜನ್ಮ ಜಾಗ ಸದ್ಯ ವಿವಾದಿತ ಭೂಮಿಯಲ್ಲ ಎಂದು‌ ಕೋರ್ಟ್ ಹೇಳಿದೆ. ಅಲ್ಲಿ ಭವ್ಯ‌ ರಾಮಮಂದಿರ ನಿರ್ಮಾಣಕ್ಕೆ ತೀರ್ಪು ನೀಡಿದೆ. ಯಾರೋ ಕಾರ್ಪೊರೇಟ್​​ಗಳು ನಾವು ಮಂದಿರ ನಿರ್ಮಾಣ ಮಾಡುತ್ತೇವೆ ಎಂದು‌ ಮುಂದೆ ಬಂದಿದ್ದರು.

ಆದರೆ, ನಾವು ಭಕ್ತರ ಮುಖಾಂತರ ಮಂದಿರ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೆವು. ಈ ದಿಸೆಯಲ್ಲಿ ಜ‌ನವರಿ 15ರಂದು ಆರಂಭಿಸಿದ್ದ ಅಭಿಯಾನಕ್ಕೆ ಭಕ್ತರು ಕೈ ಜೋಡಿಸಿದ್ದಾರೆ. ದೇಶದಲ್ಲಿ 1,500 ಕೋಟಿ ನಿಧಿ ಸಂಗ್ರಹಣೆ ಆಗುವ ನಿರೀಕ್ಷೆಯಿತ್ತು.

ಆದರೆ, ರಾಮಭಕ್ತರು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾರೆ. ಸುಮಾರು 2,100 ಕೋಟಿ ರೂ. ನಿಧಿ ಸಂಗ್ರಹವಾಗಿದೆ‌. ಈ ಪೈಕಿ ರಾಜ್ಯದಲ್ಲಿ ₹150 ಕೋಟಿ ದೇಣಿಗೆ ಸಂಗ್ರಹವಾಗಿದೆ. ಇನ್ನೂ ಕೆಲವು ಚೆಕ್ ವಿತ್ ಡ್ರಾ ಮಾಡಬೇಕಿದೆ ಎಂದರು.

ABOUT THE AUTHOR

...view details