ಬೆಂಗಳೂರು: ರಾಜ್ಯಕ್ಕೆ ಹಿಂಗಾರು ಮಳೆಯ ಆಗಮನದ ಹಿನ್ನೆಲೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಹಲವೆಡೆ ತುಂತುರು ಮಳೆ ಹಾಗೂ ಸಾಧಾರಣ ಮಳೆಯಾಗುತ್ತಿದೆ.
ನಾಲ್ಕೈದು ದಿನ ರಾಜ್ಯದಲ್ಲಿ ಮಳೆ: ಹವಮಾನ ಇಲಾಖೆ ಸ್ಪಷ್ಟನೆ - weather forecasting Department
ರಾಜ್ಯಕ್ಕೆ ಹಿಂಗಾರು ಮಳೆಯ ಆಗಮನದ ಹಿನ್ನೆಲೆ ಬೆಂಗಳೂರಿನಲ್ಲಿ ಮಳೆ ಆಗುತ್ತಿದೆ. ಅಲ್ಲದೇ ಇನ್ನು ನಾಲ್ಕೈದು ದಿನ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಲ್ಕೈದು ದಿನ ರಾಜ್ಯದಲ್ಲಿ ಮಳೆ
ಅನಿರೀಕ್ಷಿತ ಮಳೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮೆಜೆಸ್ಟಿಕ್, ಕಾರ್ಪೋರೇಷನ್ ಸರ್ಕಲ್, ಜಯನಗರ, ಮಲ್ಲೇಶ್ವರಂ, ಎಮ್ ಜಿ ರಸ್ತೆಗಳಲ್ಲಿ ಮಳೆಯಾಗುತ್ತಿದೆ.
ನಾಲ್ಕೈದು ದಿನ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈ ನಗರಕ್ಕೆ ಹಿಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದ್ದು, ರಾಜ್ಯದಲ್ಲಿಯೂ ನಾಲ್ಕೈದು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.