ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಇಂದು ಸುರಿದ ಮಳೆಗೆ ಬೆಂಗಳೂರು ನಗರ ಕೆರೆಯಂತಾಗಿದೆ. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ಗಾಳಿ ಸಹಿತ ಜೋರಾದ ಮಳೆ ಸುರಿದಿದೆ.
ಬೆಂಗಳೂರಲ್ಲಿ ನಾಳೆಯೂ ಮುಂದುವರಿಯಲಿದೆ ವರುಣನ ಆರ್ಭಟ
ಸಿಲಿಕಾನ್ ಸಿಟಿಯಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಇದು ನಾಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ
ಜಯನಗರ, ಮತ್ತಿಕರೆ, ಮೆಜೆಸ್ಟಿಕ್, ಬನಶಂಕರಿ, ಕೆಆರ್ ಮಾರ್ಕೆಟ್, ಮೈಸೂರು ರಸ್ತೆಯಲ್ಲಿ ವಿಪರೀತ ಮಳೆಯಾಗಿದೆ. ಇನ್ನು ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ತೆರಳುವ ಬೈಕ್ ಸವಾರರು ಪರದಾಡುವಂತಾಗಿದೆ.
ಅಲ್ಲದೆ ಮೋಡ ಕವಿದ ವಾತಾವರಣವಿದ್ದು ರಾತ್ರಿವರೆಗೂ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಹವಾಮಾನ ಇಲಾಖೆಯ ಇಂದು ಮತ್ತು ನಾಳೆ ಜೋರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.