ಬೆಂಗಳೂರು :ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ. ನಿನ್ನೆ ಮಧ್ಯರಾತ್ರಿಯೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಇದರಿಂದ ತಗ್ಗು ರಸ್ತೆಗಳಲ್ಲಿ, ಪಾರ್ಕ್ ಜಾಗಗಳಲ್ಲಿ, ಅಂಡರ್ ಪಾಸ್ಗಳಲ್ಲಿ ನೀರು ತುಂಬಿಕೊಂಡಿದ್ದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ರಾಜಧಾನಿಯಲ್ಲಿ ಮುಂದುವರಿದ ಮಳೆಯ ಆರ್ಭಟ : ರಸ್ತೆಗಳಲ್ಲಿ ನಿಂತ ನೀರು, ಪಾಲಿಕೆಯಿಂದ ಪರಿಹಾರ ಕಾರ್ಯ
ಸಿಲಿಕಾನ್ ಸಿಟಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಗರದ ವಿವಿಧ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ..
ಬೆಂಗಳೂರಲ್ಲಿ ಮುಂದುವರೆದ ಮಳೆ
ಮಳೆಯಿಂದ ಹಾನಿಗೊಂಡ ಪ್ರದೇಶಗಳ ಮಾಹಿತಿ :
- ಪೂರ್ವ ವಲಯ ಹಾಗೂ ದಕ್ಷಿಣ ವಲಯದಲ್ಲಿ ಮಳೆಯಿಂದ ಯಾವುದೇ ಹಾನಿಯಾಗಿಲ್ಲ.
- ಪಶ್ಚಿಮ ವಲಯದ ಲಕ್ಷ್ಮಿನಾರಾಯಣ ಪುರ, ಬಸವೇಶ್ವರ ನಗರ, ಗಾಯತ್ರಿ ನಗರಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
- ಆರ್ಆರ್ ನಗರದ ಐಡಿಯಲ್ ಹೋಮ್ಸ್ (ಅಕ್ಕಮಹಾದೇವಿ ಕನ್ವೆನ್ಷನ್ ಹಾಲ್ ಬಳಿ), ಪೀಣ್ಯ ವಾರ್ಡ್ ನಂ.38ರ 4ನೇ ಬ್ಲಾಕ್ ಹಾಗೂ ಅಲ್ಲಿರುವಂತಹ ಮನೆಗಳಿಗೆ ಮಳೆ ನೀರು ನುಗ್ಗಿದೆ.
- ದಾಸರಹಳ್ಳಿಯ ಚಿಕ್ಕಸಂದ್ರ ಕೆರೆ ಪ್ರದೇಶ, ಗುಂಡಪ್ಪ ಲೇಔಟ್, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಲೇಔಟ್ನಲ್ಲಿ ಒಳಚರಂಡಿ ನೀರಿ ತುಂಬಿ ಅವಾಂತರ ಸೃಷ್ಟಿಸಿತ್ತು.
- ಮಹಾದೇವಪುರ ಯಲಹಂಕ, ಬೊಮ್ಮನಹಳ್ಳಿಯಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದ ಕಾರಣ ಯಾವುದೇ ಹಾನಿಯಾಗಿಲ್ಲ. ಇನ್ನು ಮುಂದಿನ ಎರಡು ದಿನವೂ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಮಳೆ ಮುನ್ಸೂಚನೆ: 10 ಜಿಲ್ಲೆಗಳಿಗೆ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ