ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅನಾರೋಗ್ಯ ನೆಪವೊಡ್ಡಿ ಸದ್ಯದ ಮಟ್ಟಿಗೆ ತನಿಖೆಗೆ ಹಿಂದೇಟು ಹಾಕ್ತಿದ್ದಾರೆ. ಬಂಧನ ಮರುದಿನ ಬೆನ್ನು ನೋವು, ಜ್ವರ ಹಾಗೂ ವೈಯಕ್ತಿಕ ಕಾರಣ ಹೇಳಿರುವ ರಾಗಿಣಿಗೆ ಸದ್ಯ ಅಲರ್ಜಿ ಸಮಸ್ಯೆ ಉಂಟಾಗಿದೆ.
ನ್ಯಾಯಾಧೀಶರೆದುರು ಹಾಜರುಪಡಿಸಲು ಸಿದ್ಧತೆ... ರಾಗಿಣಿಗೆ ಮತ್ತೆ ಕಾಡಿದ ಅನಾರೋಗ್ಯ ಸಮಸ್ಯೆ - ragini arrest
ರಾಗಿಣಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರು ಪಡಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇಂದು ಮತ್ತೆ ಸಿಸಿಬಿ ವಶಕ್ಕೆ ನೀಡಲಾಗುತ್ತದೆಯಾ..? ಇಲ್ಲದೆ ಜಾಮೀನು ಮಂಜೂರಾಗಲಿದ್ಯಾ ಎಂಬುದರ ಕುರಿತು ನಿರ್ಧಾರವಾಗಲಿದೆ.
ಹೈಫೈ ಜೀವನ ನಡೆಸುತ್ತಿದ್ದ ರಾಗಿಣಿ ಸದ್ಯ ಸಿಸಿಬಿ ಕಸ್ಟಡಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಸಾಮಾನ್ಯ ಕೈದಿಯಂತೆಯೇ ದಿನದೂಡುತ್ತಿದ್ದಾರೆ. ಸದ್ಯ ಅಲರ್ಜಿ ಸಮಸ್ಯೆ ಎದುರಿಸುತ್ತಿರುವ ನಟಿ ರಾಗಿಣಿ ವೈದ್ಯರನ್ನು ಕರೆಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆ ವೈದ್ಯರನ್ನು ಕರೆಯಿಸಿ ಅಲರ್ಜಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಇದೀಗ ರಾಗಿಣಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರು ಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಂದು ಮತ್ತೆ ಸಿಸಿಬಿ ವಶಕ್ಕೆ ನೀಡಲಾಗುತ್ತದೆಯಾ..? ಇಲ್ಲದೆ ಜಾಮೀನು ಮಂಜೂರಾಗಲಿದೆಯಾ ಎಂಬುದರ ಕುರಿತು ನಿರ್ಧಾರವಾಗಲಿದೆ.