ಬೆಂಗಳೂರು:ಮಹಾಮಾರಿ ಕೊರೊನಾಗೆ ಬಲಿಯಾದ ಸ್ವಚ್ಛತಾ ಕರ್ಮಿ ಶಿಲ್ಪಾ ಅವರಿಗೆ ಇಂದು ನಗರದ ಹಲವು ಪ್ರದೇಶಗಳ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಮೋಂಬತ್ತಿ ಹಚ್ಚಿ ಸಂತಾಪ ಸೂಚಿಸಿದ್ದಾರೆ.
ಕೊರೊನಾ ವೈರಸ್ ಭಯ, ಲಾಕ್‍ಡೌನ್ ನಡುವೆಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆಗೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆಗಾಗಿ 5-6 ಆಸ್ಪತ್ರೆಗಳಿಗೆ ಅಲೆದಾಡಿದರೂ, ಬೆಡ್ ಸಿಗದೆ ಕೊನೆಯುಸಿರೆಳೆದಿದ್ದರು.