ಕರ್ನಾಟಕ

karnataka

ETV Bharat / state

ಬಾಡೂಟಕ್ಕಾಗಿ ಕೈದಿಗಳ ಬೇಡಿಕೆ... ಜೈಲಲ್ಲೇ ಪ್ರತಿಭಟನೆ - kannada news

ಮೆನುವಿನಂತೆ ಊಟ ಕೊಡುತ್ತಿಲ್ಲ. ಎಲ್ಲವೂ ಅಧಿಕಾರಿಗಳ ಇಚ್ಚೆಯಂತೆ ನಿರ್ಧರಿತವಾಗುತ್ತಿವೆ, ಮಾಂಸಾಹಾರ ನೀಡುವವರೆಗೂ ಹೋರಾಟ ನಡೆಸುವುದಾಗಿ ಕೇಂದ್ರ ಕಾರಗೃಹದ ಖೈದಿಗಳು ಪಟ್ಟುಹಿಡಿದಿದ್ದಾರೆ.

ಕೇಂದ್ರ ಕಾರಗೃಹ

By

Published : Mar 29, 2019, 8:38 PM IST

ಆನೇಕಲ್ :ಕಳೆದ ಮೂರು ತಿಂಗಳಿಂದ ಮಾಂಸಾಹಾರ ನೀಡದೆ ಅಧಿಕಾರಿಗಳು ದರ್ಪ ಮೆರೆದಿದ್ದಾರೆ ಎಂದು ಕೈದಿಗಳು ಜೈಲು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಕೇವಲ ಸಸ್ಯಾಹಾರ ಸೇವಿಸಿ ಬೇಸರವಾಗುತ್ತಿದೆ. ನಾವು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ, ಕೇಳಿದರೆ ನಾನಾ ಕೀಟಲೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಸೆರೆವಾಸಿಗಳು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಕೇಂದ್ರ ಕಾರಾಗೃಹದ ಮೆನುವಿನಂತೆ ಊಟ ಕೊಡುತ್ತಿಲ್ಲ. ಎಲ್ಲವೂ ಅಧಿಕಾರಿಗಳ ಇಚ್ಚೆಯಂತೆ ನಿರ್ಧರಿತವಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಮೂರು ತಿಂಗಳಿಂದ ನಾನ್ ವೆಜ್ ಇಲ್ಲ ಎಂದು ಕೈದಿಗಳು ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆಗಿಳಿದಿದ್ದಾರೆ. ಜೈಲಿನಲ್ಲಿ ಮಾಂಸಾಹಾರಿಗಳೂ ಇದ್ದಾರೆ ಸಸ್ಯಾಹಾರಿಗಳೂ ಇದ್ದಾರೆ. ಆದರೆ ತೊಂಬತ್ತಕ್ಕೂ ಹೆಚ್ಚು ದಿನ ಮಾಂಸಾಹಾರ ತಿನ್ನುವವರಿಗೆ ಅನ್ಯಾಯವಾಗಿದೆ, ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲಿಸಬೇಕೆಂದು ಕೋರಿದ್ದಾರೆ.

ಮಾಂಸ ಟೆಂಡರ್ ಗುತ್ತಿಗೆದಾರ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ಪ್ರಕರಣದಲ್ಲಿ ಸಿಕ್ಕುಬಿದ್ದ ಪರಿಣಾಮ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆದಂತೆ ಮಾಂಸಾಹಾರಿ ಖೈದಿಗಳಿಗೆ ಶಿಕ್ಷೆ ನೀಡಿದ್ದಾರೆ. ಹೊಸ ಟೆಂಡರ್ ಕರೆಯುವಲ್ಲಿ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆಂದು ಖೈದಿಗಳು ಹೇಳಿದ್ದಾರೆ.

ಪ್ರತಿಭಟನಾ ನಿರತ ಕೈದಿಗಳನ್ನ ಸಮಾಧಾನ ಪಡಿಸುತ್ತಿರುವ ಮುಖ್ಯ ಅಧೀಕ್ಷಕ ಸೋಮಶೇಖರ್ ಮಾತಿಗೆ ಕ್ಯಾರೆ ಎನ್ನದ ಕೈದಿಗಳು ಬೇಡಿಕೆಯ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details