ಕರ್ನಾಟಕ

karnataka

ETV Bharat / state

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿ ಗ್ರಾಮಗಳ ಕ್ವಾರಿ ಜಾಗದಲ್ಲಿ ಬಿಬಿಎಂಪಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದ ಜನತೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ

By

Published : Jun 23, 2019, 2:30 AM IST

ಬೆಂಗಳೂರು:ಜಕ್ಕೂರು ವಾರ್ಡ್ ವ್ಯಾಪ್ತಿಯ ಬೆಳ್ಳಳ್ಳಿ ಸಮೀಪದ ಕ್ವಾರಿ ಜಾಗದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಬಿಬಿಎಂಪಿ ಕ್ರಮ ಖಂಡಿಸಿ ಬ್ಯಾಟರಾಯನಪುರ ಮತ್ತು ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿ ಗ್ರಾಮಗಳ ಕ್ವಾರಿ ಜಾಗದಲ್ಲಿ ಬಿಬಿಎಂಪಿ ಯಾವುದೇ ವೈಜ್ಞಾನಿಕ ಕ್ರಮ ಅನುಸರಿಸದೆ ಕಸ ವಿಲೇವಾರಿ ಮಾಡುತ್ತಿದ್ದು,ಸುತ್ತಮುತ್ತಲ ಪ್ರದೇಶದ ಜನತೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಿಬಿಎಂಪಿ ಕೂಡಲೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕ ಕಸ ವಿಲೇವಾರಿ ಖಂಡಿಸಿ ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಈ ಹಿಂದೆ ನಗರದ ಹೊರವಲಯದ ಮಂಡೂರು, ಮಾವಳ್ಳಿಪುರ, ಚಿಕ್ಕಬಿದರಕಲ್ಲು ಸೇರಿದಂತೆ ಹಲವೆಡೆ ವೈಜ್ಞಾನಿಕ ಕಸ ವಿಲೇವಾರಿಯ ಭರವಸೆ ನೀಡಿ ಕಸ ಸುರಿದ ಬಿಬಿಎಂಪಿ, ಅಲ್ಲಿನ ಕಸ ವಿಲೇವಾರಿ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಗ್ರಾಮಗಳ ಅಂತರ್ಜಲ ಕಲುಷಿತಗೊಳ್ಳುವಂತೆ ಮಾಡಿತ್ತು. ಇದೀಗ ಕಸ ವಿಲೇವಾರಿ ನಿಲ್ಲಿಸಿದ್ದರೂ ಸಹ ಆ ಗ್ರಾಮಗಳಲ್ಲಿ ಇಂದಿಗೂ ಕಸದಿಂದ ಉಂಟಾದ ತೊಂದರೆ ನಿವಾರಣೆಯಾಗಿಲ್ಲ ಎಂದು ದೂರಿದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕದ ಗ್ರಾಮಗಳ ಸಮಸ್ಯೆ ಪರಿಶೀಲನೆಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಬೆಳ್ಳಳ್ಳಿ ಮತ್ತು ಮಿಟ್ಟಿಗಾನಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಹೂಡಲಿ, ಗ್ರಾಮ ವಾಸ್ತವ್ಯಕ್ಕೆ ತಮ್ಮೊಟ್ಟಿಗೆ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ, ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರನ್ನು ಕರೆತರಲಿ ಎಂದು ಹೇಳಿದರು.

ABOUT THE AUTHOR

...view details