ಕರ್ನಾಟಕ

karnataka

ETV Bharat / state

ಸಿಸಿಬಿಯಿಂದ ಪ್ರಿಯಾಂಕಾ ಆಳ್ವಾಗೆ 2ನೇ ನೋಟಿಸ್: ವಿಚಾರಣೆಗೆ ಹಾಜರಾಗ್ತಾರಾ ಒಬೆರಾಯ್‌ ಪತ್ನಿ? - ಪ್ರಿಯಾಂಕ ಆಳ್ವ,

ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಸಿಸಿಬಿಯ ಎರಡನೇ ನೋಟಿಸ್​ಗಾದ್ರೂ ಕೇರ್ ಮಾಡ್ತಾರಾ ಎಂಬ ಅನುಮಾನ ಮೂಡಿದೆ.

Priyanka Alva attend to ccb investigation, Priyanka Alva today attend to ccb investigation, Sandalwood drug case, Sandalwood drug case 2020, Sandalwood drug case 2020 news, Priyanka Alva, Priyanka Alva news, Priyanka Alva latest news, ಪ್ರಿಯಾಂಕ ಆಳ್ವ ಸಿಸಿಬಿ ವಿಚಾರಣಗೆ ಹಾಜರ್​, ಇಂದು ಪ್ರಿಯಾಂಕ ಆಳ್ವ ಸಿಸಿಬಿ ವಿಚಾರಣಗೆ ಹಾಜರ್​, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ 2020 ಸುದ್ದಿ, ಪ್ರಿಯಾಂಕ ಆಳ್ವ, ಪ್ರಿಯಾಂಕ ಆಳ್ವ ಸುದ್ದಿ,
ಎರಡನೇ ನೋಟಿಸ್ ಗಾದ್ರು ಕೇರ್ ಮಾಡ್ತಾರಾ ನಟ ವಿವೇಕ್ ಒಬೆರಾಯ್ ಪತ್ನಿ

By

Published : Oct 20, 2020, 10:03 AM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಡೀಲ್ ಲಿಂಕ್ ಆರೋಪ ಪ್ರಕರಣದ ಎರಡನೇ ನೋಟಿಸ್​ಗಾದ್ರೂ ಪ್ರಿಯಾಂಕ ಆಳ್ವಾ ಕೇರ್ ಮಾಡ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಪ್ರಿಯಾಂಕ ಆಳ್ವಾ ಡ್ರಗ್ ಪ್ರಕರಣದ 6ನೇ ಆರೋಪಿಯಾಗಿದ್ದು ಇವರು ಆದಿತ್ಯ ಆಳ್ವಾ ಸೋದರಿಯಾಗಿದ್ದಾರೆ. ಇವರಿಗೆ ಸಿಸಿಬಿ ಕಚೇರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ರಿಜಿಸ್ಟರ್ಡ್‌ ಪೋಸ್ಟ್ ಹಾಗೂ ವಾಟ್ಸ್‌ ಆ್ಯಪ್​ ಮೂಲಕ ನೋಟಿಸ್ ನೀಡಲಾಗಿದೆ.

ಪ್ರಿಯಾಂಕ ಆಳ್ವಾ ಆರೋಪಿ ಆದಿತ್ಯಾ ಆಳ್ವಾಗೆ ಆಸರೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಸಿಸಿಬಿ ತನಿಖೆ ವೇಳೆ ಇವರು ಸರಿಯಾದ ಉತ್ತರ ನೀಡಿರಲಿಲ್ಲ. ಸದ್ಯ ಈ ಕೇಸ್​ನ 6ನೇ ಆರೋಪಿ ಆದಿತ್ಯಾ ಆಳ್ವಾ ನಾಪತ್ತೆಯಾಗಿದ್ದಾನೆ.

ಇದೇ ತಿಂಗಳ 15 ರಂದು ಮುಂಬೈನ ನಿವಾಸದಲ್ಲಿ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ ಆಳ್ವಾಗೆ ಮೊದಲ ನೋಟಿಸ್ ನೀಡಿದ್ರೂ ಸಹ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಸಿಸಿಬಿ ಮತ್ತೊಂದು ನೋಟಿಸ್ ರವಾನಿಸಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ವಿಚಾರಣೆಗೆ ಹಾಜರಾಗದೆ ಹೋದ್ರೆ ಪೊಲೀಸರು ಮತ್ತಷ್ಟು ಖಡಕ್ ಎಚ್ಚರಿಕೆ ನೀಡಲಿದ್ದಾರೆ.

ABOUT THE AUTHOR

...view details