ಬೆಂಗಳೂರು:ಪ್ರಿಂಟಿಂಗ್ ಪ್ರೆಸ್ ಮಾಲೀಕರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬಂಧನ ಭೀತಿಯಿಂದ ಥೈರಾಯಿಡ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಂದ್ರಾಲೇಔಟ್ 1ನೇ ಹಂತದ ನಿವಾಸಿ ಲಿಯಾಕತ್ ಆಲಿಖಾನ್ ಎಂಬ ವ್ಯಕ್ತಿ ಹತ್ಯೆಯಾಗಿದ್ದನು. ಕೊಲೆಗೀಡಾದ ವ್ಯಕ್ತಿಗೆ ಪರಿಚಯಸ್ಥರಾಗಿದ್ದ ಇಲಿಯಾಜ್ ಹಾಗೂ ಕೆಲ ವ್ಯಕ್ತಿಗಳ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು ಈತನನ್ನ ಪ್ರಶ್ನಿಸಲು ಮನೆಗೆ ಹೋಗಿದ್ದ ವೇಳೆ ಆತ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿರುವುದು ಗೊತ್ತಾಗಿದೆ.
ಮುಂಜಾಗ್ರತೆ ಕ್ರಮವಾಗಿ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಆರೋಪಿ ಕಾವಲಿಗಾಗಿ ನಿಯೋಜಿಸಲಾಗಿದೆ. ಡಿಸ್ಚಾರ್ಜ್ ಆದ ಆದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ವಾಸವಾಗಿದ್ದ ಲಿಯಾಕತ್ ಖಾನ್, ಹಲವು ವರ್ಷಗಳಿಂದ ಗಂಗೊಂಡನಹಳ್ಳಿಯ ರಾಯಲ್ ಕಮ್ಯೂನಿಕೇಷನ್ ಎಂಬ ಹೆಸರಿನ ಪ್ರಿಂಟಿಂಗ್ ಪ್ರೆಸ್ ಮಾಲೀಕನಾಗಿದ್ದರು. ಜೋಹರ್, ವಸೀಂ ಹಾಗೂ ಇಲಿಯಾಜ್ ಖಾನ್ ಅವರು ಲಿಯಾಕತ್ ಖಾನ್ನೊಂದಿಗೆ ಆರ್ಥಿಕ ಪಾಲುದಾರರಾಗಿದ್ದರು.
ಪ್ರಿಂಟಿಂಗ್ ಪ್ರೆಸ್ ಮಾಲೀಕ ಲಿಯಾಕತ್ ಅಲಿಖಾನ್ ಕೆಲಸ ಮುಗಿಸಿ ಪ್ರತಿದಿನ ನಾಗರಭಾವಿಯಲ್ಲಿರುವ ಜಿಮ್ ತೆರಳಿ ನಂತರ ಮನೆಗೆ ಹೋಗುತ್ತಿದ್ದರು. ನಿನ್ನೆ ಸಂಜೆ ಜಿಮ್ ತೆರಳಿದ ಲಿಯಾಕತ್ 11 ಗಂಟೆಯಾದರೂ ಮನೆಗೆ ತೆರಳಲಿರಲಿಲ್ಲ. ಆತಂಕಗೊಂಡ ಪುತ್ರ ಕುಟುಂಬಸ್ಥರು ನಾಯಂಡಹಳ್ಳಿ ಚೆಟ್ಟಿಸ್ ಪೆಟ್ರೋಲ್ ಬಂಕ್ ಹಿಂಭಾಗದ ಮನೆಗೆ ಹೋಗಿ ನೋಡಿದಾಗ ಬರ್ಬರವಾಗಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೆಲ ವ್ಯಕ್ತಿಗಳ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಂತಕರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.