ಕರ್ನಾಟಕ

karnataka

ETV Bharat / state

ಕೋಚಿಂಗ್​ ಸೇರಿದ್ದ ಯುವತಿಗೆ ಪ್ರೀತಿಯ ಹೆಸರಲ್ಲಿ ದೋಖಾ ಆರೋಪ... ಪ್ರಿನ್ಸಿಪಾಲ್ ವಿರುದ್ಧ ಎಫ್ಐಆರ್! - principal allegedly cheated

ಎಂಬಿಬಿಎಸ್​ ಸೀಟ್ ಕೊಡಿಸುವ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆ ಒಬ್ಬರಿಗೆ ಮೋಸ ಮಾಡಿರುವ ಘಟನೆ ಸಿದ್ದಿ ಕ್ಲಾಸ್ ಕೋಚಿಂಗ್ ಸೆಂಟರ್​ ಬಳಿ ಕಂಡು ಬಂದಿದೆ.

bng

By

Published : Sep 11, 2019, 9:03 AM IST

ಬೆಂಗಳೂರು: ಎಂಬಿಬಿಎಸ್​ ಸೀಟ್ ಕೊಡಿಸುವ ಜೊತೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ರಾಮಮೂರ್ತಿ ನಗರದ ಅಂಬರ್​ ಲೇ ಔಟ್​ನಲ್ಲಿರುವ ಸಿದ್ದಿ ಕ್ಲಾಸ್ ಕೋಚಿಂಗ್ ಸೆಂಟರ್​ ಬಳಿ ಘಟನೆ ನಡೆದಿದೆ.

ಪ್ರಿನ್ಸಿಪಾಲ್ ವಿರುದ್ದ ಎಫ್ಐಆರ್ ದಾಖಲು

ರಾಮಮೂರ್ತಿ ನಗರದ ಸಿದ್ದಿ ಕ್ಲಾಸ್​ನಲ್ಲಿ ವೈದ್ಯಕೀಯ ಕೋರ್ಸ್​​ಗಾಗಿ ಸಂತ್ರಸ್ತೆ ಸೇರಿಕೊಂಡಿದ್ದರು. ಈ ವೇಳೆ, ಕಾಲೇಜಿನ ಜನರಲ್ ಮ್ಯಾನೇಜರ್ ಆಂಡ್ ಪ್ರಾಂಶುಪಾಲ ನಿರಂಜನ್ ಗೌಡ ಸಂತ್ರಸ್ತೆ ಭೌತಶಾಸ್ತ್ರ ವಿಷಯದಲ್ಲಿ ವೀಕ್ ಇದ್ದ ಕಾರಣ ಅವಳ ಜೊತೆ ಮೊದಲು ಸ್ನೇಹ ಬೆಳೆಸಿ, ನಂತರ ಪ್ರೀತಿ ಮಾಡುವುದಾಗಿ ನಂಬಿಸಿದ್ದ. ಜೊತೆಗೆ ಪಾಠ ಹೆಳುವ ನೆಪದಲ್ಲಿ ಯುವತಿಯನ್ನು ಭೇಟಿಯಾಗಿ ಸಲುಗೆ ಬೆಳೆಸಿದ್ದ.

ಇನ್ನು ಸಂತ್ರಸ್ತೆ ಪಿಣ್ಯ ಬಳಿ ತಂದೆ ತಾಯಿ ಜೊತೆ ವಾಸವಿದ್ದು, ತಾಯಿ ತಂದೆ ಇಲ್ಲದ ಸಂದರ್ಭದಲ್ಲಿ ಪಾಠ ಹೇಳಿಕೊಡುವ ನೆಪದಲ್ಲಿ ಮನೆಗೆ ತೆರಳಿ ನಿನ್ನನು ಮದುವೆಯಾಗುತ್ತೇನೆ. ಹಾಗೆ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ.‌

ಈ ಕುರಿತಂತೆ ನೊಂದ ಸಂತ್ರಸ್ತೆ ‌ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ನಿರಂಜನ್ ಗೌಡ ವಿರುದ್ಧ 376, 420 ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತಲೆ ಮರೆಸಿಕೊಂಡಿರುವ ನಿರಂಜನ್​ಗೆ ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details