ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಸೋಂಕು ಹಿನ್ನೆಲೆ ಪರೀಕ್ಷೆ ನಡೆಸಬೇಕಾ ಬೇಡ್ವಾ ಎಂಬ ಚರ್ಚೆ, ವಾದಗಳ ನಡುವೆಯೇ ಇದೀಗ SSLC ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ಜುಲೈ 19-22 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಸಲಾಯ್ತು.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಯಾವ ರೀತಿ ಒಳ ಪ್ರವೇಶಿಸಬೇಕು, ಪರೀಕ್ಷಾ ಕೊಠಡಿ ಸಂಖ್ಯೆ, ಸ್ಯಾನಿಟೈಸ್ ಮಾಡುವುದು, ಆರೋಗ್ಯ ತಪಾಸಣೆ, ಮೊಬೈಲ್ ಸಂಗ್ರಹ, ಬ್ಯಾಗ್ ಸೆಂಟರ್ ಹೀಗೆ ಪ್ರತಿಯೊಂದಕ್ಕೂ ಜಾಗ ನಿಗದಿ ಮಾಡಲಾಗಿದೆ.